ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಡಾ. ಕೆ ಜೈಮುನಿಗೆ ಸ್ವರ್ಣ ಪದಕ

ದಾವಣಗೆರೆ. ಜು.೨೨: ಯೂತ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್‌ ಆರ್ಗನೈಜೇಶನ್ ಆಫ್ ನೇಪಾಳ & ಯೂತ್ ಸ್ಪೋರ್ಟ್ಸ್‌ ಡೆವಲಪ್‌ ಮೆಂಟ್‌ ಅಸೋಸಿಯೇಷನ್ ಆಫ್ ಇಂಡಿಯಾ  ಇವರ ಸಂಯುಕ್ತ ಆಶ್ರಯದಲ್ಲಿ ನೇಪಾಳದ ಖಠ್ಮಂಡು ತ್ರಿಭುವನ್ ಆರ್ಮಿ ಟ್ರೈನಿಂಗ್ ಸೆಂಟರ್ ಸ್ಟೇಡಿಯಂನಲ್ಲಿ ಜು. 19, 20ರಂದು ನಡೆದ ಇಂಡೋ ಮತ್ತು ನೇಪಾಳ್ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ 50 ರಿಂದ 60ನೇ ವಯೋಮಿತಿ  ಪುರುಷರ ವಿಭಾಗದಲ್ಲಿ ಡಾ. ಕೆ.ಜೈಮುನಿ ಇವರು ಪ್ರಥಮ ಸ್ಥಾನಗಳಿಸುವುದರ ಮೂಲಕ ಸ್ವರ್ಣ ಪದಕವನ್ನು ಗಳಿಸಿದ್ದಾರೆ.
ಈ  ಸಂದರ್ಭದಲ್ಲಿ ನೇಪಾಳ್ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಮತ್ತು ಸ್ಯಾನ್ ಅಧ್ಯಕ್ಷರಾದ  ಭರತ್ ಖಡಕ ಇವರು ಡಾ. ಕೆ.ಜೈಮುನಿ  ಇವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.  ಭಾರತದ ತರಬೇತುದಾರರಾದ ಅಭಿಲಾಷ್, ಕಬ್ಬಡಿ ಹಿರಿಯ   ಆಟಗಾರರಾದ ಅಮಿತ್ ಕುಮಾರ್ ಸ್ಪೋರ್ಟ್ಸ್ ಕ್ರೀಡಾ ವ್ಯವಸ್ಥಾಪಕ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.