ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನದೂರದರ್ಶನ ಕಾರ್ಯಕ್ರಮ

ಕಲಬುರಗಿ:ಡಿ.08: ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಕಲ್ಬುರ್ಗಿ ದೂರದರ್ಶನ ಕೇಂದ್ರ ಸಿದ್ಧಪಡಿಸಿದ ವಿಶೇಷ ಚರ್ಚೆ ಕಾರ್ಯಕ್ರಮ ಡಿಸೆಂಬರ್ 9ರಂದು ಮಧ್ಯಾಹ್ನ 2.30 ನಿಮಿಷಕ್ಕೆ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.
ಈ ವಿಶೇಷ ಚರ್ಚೆಯಲ್ಲಿ ದಕ್ಷಿಣ ಭಾರತ ಮಾನವ ಸಂಪನ್ಮೂಲ ಶಿಕ್ಷಣ ಮತ್ತು ಸಂರಕ್ಷಣಾ ಸಂಘಟನೆಯ ಕಲ್ಬುರ್ಗಿ ಜಿಲ್ಲಾ ಸಂಚಾಲಕರಾದ ಡಾ. ದೇವೇಂದ್ರಪ್ಪ ಕಟ್ಟಿಮನಿ ಮತ್ತು ಕಾನೂನು ತಜ್ಞರಾದ ಮನೋಹರ ಬೆಟ್ಟದ ಜೇವರ್ಗಿ ಪಾಲ್ಗೊಳ್ಳಲಿದ್ದಾರೆ.
ಈ ಚರ್ಚೆಯನ್ನು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ಅಧಿಕಾರಿ ಡಾ. ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ ಕಾರ್ಯಕ್ರಮವನ್ನು ಪ್ರಸಾರ ನಿರ್ವಾಹಕರಾದ ಸಂಗಮೇಶ್ವರ ಸಂಯೋಜಿಸಿ ಸಂಕಲನ ಮಾಡಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ ಎಸ್ ರುಳಿ ತಿಳಿಸಿದ್ದಾರೆ