ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಂಗಳೂರು, ಮಾ.೨೩- ಆಧುನಿಕ ಯುಗದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಬೇಕು. ಸ್ವಾಭಿಮಾನಿ ಬದುಕು ಸಾಗಿಸಬೇಕು ಎಂದು ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ ತಿಳಿಸಿದರು.
ನಗರದಲ್ಲಿಂದು ಕೊತ್ತನೂರಿನ ಬರ್ಡ್ಸ್ ಸೊಸೈಟಿ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳು ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದರು.
ಮಹಿಳಾ ದಿನಾಚರಣೆಯು ಮಹಿಳೆಯರ ಕೊಡುಗೆ ಸ್ಮರಿಸುವ ಹಾಗೂ ಅವರನ್ನು ಗೌರವಿಸುವ ದಿನವಾಗಿದೆ. ಇನ್ನೂ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿಯೂ ಮಹಿಳೆಯರು ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ತಮಿಳುನಾಡಿನ ಸೆಂಟ್ ಚರ್ಚ್‌ನ
ಬಿಆರ್. ಗ್ರಾಸ್ಪರ್ ಎಸ್.ಎಚ್ ಮಾತನಾಡಿ, ೧೯೧೧ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯ, ಜರ್ಮನಿ, ಸ್ವಿಜರ್‌ಲ್ಯಾಂಡ್ ದೇಶಗಳಲ್ಲಿ ಜನರು ಒಂದು ಕಡೆ ಸೇರುವ ಮೂಲಕ ಮಹಿಳಾ ದಿನ ಆಚರಿಸಲು ಆರಂಭಿಸಿದ್ದರು. ಈಗ ಜಾಗತಿಕವಾಗಿ ಈ ದಿನ ಮಹತ್ವ ಪಡೆದಿದ್ದು, ಮಹಿಳಾ ಸಬಲೀಕರಣದ ಸಂದೇಶ ಸಾರಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೆಂಟ್ ಮಾಕ್ಸ್ ಚರ್ಚಿನ ಪಾದ್ರಿ ದಿವ್ಯಾನಾಥನ್, ಗಾರ್ಡನ್ ಬ್ಯಾಂಕ್ ಮುಖ್ಯಸ್ಥೆ ನಿಲೀಮಾ ಜಿಎಂ, ಸಲ್ಮಾಮ್ ತಾಜ್(ಬಿಎಂಡಿಸಿಸಿ), ಸಹಾಯಕ ಪ್ರಾಧ್ಯಾಪಕಿ ಝಾನ್ಸಿರಾಣಿ, ಸೊಸೈಟಿಯ ಕಂಜುಮಾಲ್ ವರ್ಗಿಸ್, ಗಜಲಕ್ಷ್ಮೀ, ಸೇರಿದಂತೆ ಪ್ರಮುಖರಿದ್ದರು.