ಅಂತಾರಾಷ್ಟ್ರೀಯ ಮಕ್ಕಳ ಪುಸ್ತಕ ದಿನ ಆಚರಣೆ

ವಿಜಯಪುರ, ಏ.3: ಅಂತಾರಾಷ್ಟ್ರೀಯ ಮಕ್ಕಳ ಪುಸ್ತಕ ದಿನವು ಮಕ್ಕಳ ಸಾಹಿತ್ಯದ ವಾರ್ಷಿಕ ಆಚರಣೆಯಾಗಿದೆ. ಮಕ್ಕಳು ಸಾಹಿತ್ಯವನ್ನು ಮೆಚ್ಚುವಂತೆ ಪೆÇ್ರೀತ್ಸಾಹಿಸಲು ಮತ್ತು ಪುಸ್ತಕಗಳನ್ನು ಓದುವ ಪ್ರೀತಿಯನ್ನು ಬೆಳೆಸುವ ಗುರಿಯನ್ನು ಇದು ಹೊಂದಿದೆ. ಯುವಜನರಿಗೆ ಪುಸ್ತಕಗಳ ಮಹತ್ವ ಮತ್ತು ಚಿಕ್ಕ ವಯಸ್ಸಿನಿಂದಲೇ ಅದರ ಪ್ರಭಾವವನ್ನು ಇದು ಒತ್ತಿಹೇಳುತ್ತದೆ.
ಇದನ್ನು ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಅವರ
ಜನ್ಮದಿನವಾದ ಏಪ್ರಿಲ್ 2 ರ ನೆನಪಿಗಾಗಿ 1967 ರಿಂದ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಓದುಗರನ್ನು
ಆಕರ್ಷಿಸಲು ಮತ್ತು ಮಕ್ಕಳ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಿ,ಪೆÇ್ರೀತ್ಸಾಹಿಸಲು ಇದನ್ನು ಆಯೋಜಿಸಲಾಗುತ್ತಿದೆ.
ಮಕ್ಕಳಲ್ಲಿ ಪುಸ್ತಕ ಓದಿನಿಂದ ಅರಿವಿನ ಬೆಳವಣಿಗೆ,
ಶಬ್ದಕೋಶದ ಸುಧಾರಣೆ, ಸಹಾನುಭೂತಿ ಮತ್ತು ಕಲ್ಪನೆ, ನೈತಿಕ ಸುಧಾರಣೆಯನ್ನು ಕಾಣಲು ಸಾಧ್ಯವಾಗುತ್ತದೆ.
ಈ ದಿನದ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ, ಶ್ರೀನಿಧಿ, ಸುಶಾಂತ್, ಶ್ರೇಯಾ ಬಂಡೆ ಅವರು ಪುಸ್ತಕಗಳನ್ನು ಪ್ರದರ್ಶಿಸಿ,ಅಂತಾರಾಷ್ಟ್ರೀಯ ಮಕ್ಕಳ ಪುಸ್ತಕ ದಿನವನ್ನು ಆಚರಿಸಿದರು.