ಅಂತಾರಾಷ್ಟ್ರೀಯ ಚೆಸ್ ದಿನ ಆಚರಣೆ

ರಾಯಚೂರು,ಜು.೨೧-
ನಗರದ ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಚೆಸ್ ದಿನ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಚಂದ್ರಣ್ಣ ಎ ಮಕ್ಕಳಲ್ಲಿ ಪಾಠದ ಜೊತೆ ಜೊತೆಗೆ ಆಟವು ಸಹ ಅಗತ್ಯವಾಗಿ ಬೇಕಾಗಿದೆ.
ಇಂದಿನ ಮಕ್ಕಳಿಗೆ ಕೆಲವು ಆಟಗಳು ಗೊತ್ತಿಲ್ಲ, ಮೊದಲೆಲ್ಲ ಮರಕೋತಿಯಾಟ, ಗಿಲ್ಲಿ-ದಾಂಡಾಟ, ಕುಂಟೆಬಿಲ್ಲೆ, ಚದುರಂಗ ಈ ರೀತಿ ಆಟಗಳು ಮಕ್ಕಳು ಸೇರಿಕೊಂಡು ಆಡುತ್ತಿದ್ದರು. ಈ ಚದುರಂಗ ಆಟವನ್ನೇ ಚೆಸ್ ಎಂದು ಕರೆಯುತ್ತಿದ್ದಾರೆ. ಈಗ ಇತ್ತೀಚಿಗೆ ಮೊಬೈಲ್‌ಗಳ ಸಂಖ್ಯೆ ಹಾವಳಿ ಹೆಚ್ಚಾಗಿ ಮಕ್ಕಳು ಮೊಬೈಲ್‌ನಲ್ಲಿ ಆಟ ಆಡುತ್ತಿದ್ದಾರೆ, ಈ ರೀತಿ ಮೊಬೈಲ್‌ನಲ್ಲಿ ಆಟ ಆಡುವುದನ್ನು ಮಕ್ಕಳ ಮನಸ್ಸುಗೆ ಮಾತ್ರ ಕೆಲಸ ಕೊಡುತ್ತಿದ್ದು, ಆಗಿನ ಆಟಗಳು ಆಗಿನ ಮಕ್ಕಳು ಮನಸ್ಸು ಒಂದೇ ಅಲ್ಲದೆ ಮೈದಾನದಲ್ಲಿ ಇಳಿದು ಆಟ ಆಡುತ್ತಿರುವುದರಿಂದ ದೈಹಿಕವಾಗಿಯೂ ಸದೃಢವಾಗಿ ಇರುತ್ತಿದ್ದರು ಜೊತೆಗೆ ಮಾನಸಿಕವಾಗಿ ಗಟ್ಟಿಯಾಗಿ ಇರುತ್ತಿದ್ದರು. ಚೆಸ್ ಆಟವು ಮಕ್ಕಳ ಬುದ್ಧಿ ಮಟ್ಟವನ್ನು ಚುರುಕುಗೊಳಿಸಿ ಅವರನ್ನು ಜಾಗೃತವರನ್ನಾಗಿ ಇರುವಂತೆ ಮಾಡುತ್ತದೆ ಪ್ರತಿಯೊಬ್ಬ ಮಕ್ಕಳು ಈ ರೀತಿಯ ಆಟಗಳಲ್ಲಿ ಭಾಗವಹಿಸಬೇಕು. ಮಕ್ಕಳಿಗಾಗಿ ಈ ರೀತಿ ಸ್ಪರ್ಧೆಗಳು ಏರ್ಪಡಿಸಿರುವ ಸಂಸ್ಥೆ ಅವರಿಗೂ, ಶಿಕ್ಷಕ ಬಳಗಕ್ಕೂ ಅಭಿನಂದಿಸಬೇಕು ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ಜಿಲ್ಲಾಧಿಕಾರಿಗಳಾದ ಚಂದ್ರಣ್ಣ.ಎ ರವರು ತಿಳಿಸಿದರು.
ಈ ದಿನಾಚರಣೆಯ ಅಂಗವಾಗಿ ಇಂಟರ್ ಸ್ಕೂಲ್ ಚೆಸ್ ಕಾಂಪಿಟೇಶನ್ ನಡೆಸಲಾಯಿತು. ೩೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ದಿ.೧೬.೦೭.೨೦೨೩ ರಂದು ಚೆಸ್ ಪಂದ್ಯ ಸ್ಪರ್ಧೆಗಳನ್ನು ನಡೆಸಲಾಯಿತು. ಇದರಲ್ಲಿ ೩೦ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಎಂದು ಆಯ್ಕೆ ಮಾಡಿ ಜುಲೈ -೨೦ ಬಹುಮಾನ ವಿತರಣೆ ಮಾಡಲಾಯಿತು.
ಈ ದಿನದಂದು ಕಾರ್ಯಕ್ರಮಕ್ಕೆ ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿ ಶಾಲಾ ಮಕ್ಕಳು ಈ ರೀತಿ ಆಟಗಳನ್ನು ಮೈಗೂಡಿಸಿಕೊಂಡರೆ ಅವರ ಬುದ್ಧಿ ಮಟ್ಟ ಚುರುಕುಗೊಂಡು ಅವರು ಭವಿಷ್ಯದಲ್ಲಿ ಒಳ್ಳೆ ಆಟಗಾರರಾಗಬೇಕೆಂದು ಸಂದರ್ಭದಲ್ಲಿ ತಿಳಿಸುತ್ತೇನೆ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ದಯಾನಂದ.ಎಂ.ಬೇಲೂರೆ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ರಾಯಚೂರು ಇವರು ಆಶಯ ವ್ಯಕ್ತಪಡಿಸಿದರು.
ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಿ.ಬಿ.ಎಸ್.ಇ. ಶಾಲೆ ಶ್ರೀಮತಿ ಡಿ.ಜಿ.ನಳಿನಿ ಪ್ರಾಂಶುಪಾಲರು, ಆಡಳಿತ ಅಧಿಕಾರಿಗಳಾದ ಕುಮಾರಿ ಸುಭಾಷಿನಿ ವಿನಿಲಾಕ್ಷಿ, ದೈಹಿಕ ಶಿಕ್ಷಕರಾದ ಬ್ರಹ್ಮಾನಂದ ರೆಡ್ಡಿ ವೇದಿಕೆ ಮೇಲೆ ಇದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಹಾಗೂ ಶಾಲೆಯ ಮಕ್ಕಳು ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.