ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನ

ಡಿಸೆಂಬರ್‌ 2ರಂದು ಗುಲಾಮಗಿರಿ ನಿರ್ಮೂಲನೆ ದಿನಾಚರಣೆ ಆಚರಿಸಲಾಗುತ್ತದೆ. ಬೆದರಿಕೆ, ಹಿಂಸಾಚಾರ, ದಬ್ಬಾಳಿಕೆ, ಅಧಿಕಾರ ದುರುಪಯೋಗ ತಡೆಗಟ್ಟುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. 1949ರಲ್ಲಿ ವಿಶ್ವ ಸಂಸ್ಥೆಯಲ್ಲಿ ಇದನ್ನು ಆಚರಿಸಲು ಘೋಷಣೆ ಮಾಡಲಾಯಿತು. ಗುಲಾಮರ ವ್ಯಾಪಾರ ಮತ್ತು ಗುಲಾಮಗಿರಿಯು ಮಾನವೀಯತೆಯ ವಿರುದ್ಧದ ಅಪರಾಧವೆಂದು ಪರಿಗಣಿಸಲಾಗುತ್ತದೆ..

ಗುಲಾಮರ ವ್ಯಾಪಾರವನ್ನು ಅಂತ್ಯಗೊಳಿಸಿದ ನಂತರ ಗುಲಾಮಗಿರಿ ನಿಂತಿಲ್ಲ. ಇದು ನಡೆಯುತ್ತಲೇ ಇದೆ ಮತ್ತು ಸಮಾಜದಲ್ಲಿ ದುರ್ಬಲರಾಗಿರುವವರಿಗೆ ಬೆದರಿಕೆ ಹಾಕತ್ತಲೇ ಇದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ, ವಿಶ್ವಾದ್ಯಂತ 40 ದಶ ಲಕ್ಷಕ್ಕೂ ಹೆಚ್ಚು ಜನರು ಆಧುನಿಕ ಗುಲಾಮಗಿರಿಗೆ ಬಲಿಯಾಗಿದ್ದಾರೆ. 150 ದಶ ಲಕ್ಷಕ್ಕೂ ಹೆಚ್ಚು ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗಿದ್ದಾರೆ. ಇಂದು ವಿಶ್ವದಾದ್ಯಂತ ಹತ್ತು ಮಕ್ಕಳಲ್ಲಿ ಒಬ್ಬರು ಇದಕ್ಕೆ ಬಲಿಪಶುಗಳಾಗಿದ್ದಾರೆ.

ಹಿನ್ನೆಲೆ : ಗುಲಾಮಗಿರಿಯನ್ನು ನಿರ್ಮೂಲನೆ ಮಾಡುವ ದೃಷ್ಟಿಯಿಂದ ಡಿ.2ರಂದು ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1949, ಡಿ.2ರಂದು ಈ ದಿನವನ್ನು ಆಚರಿಸುವಂತೆ ಘೋಷಿಸಲಾಯಿತು. ಮನುಷ್ಯರನ್ನು ಪ್ರಾಣಿಗಳಂತೆ ಮಾರುವುದು ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರ ಮೇಲೆ ಶೋಷಣೆ ಮಾಡುವುದನ್ನು ನಿಗ್ರಹಿಸುವ ದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಯಿತು.ಆಧುನಿಕ-ದಿನದ ಗುಲಾಮಗಿರಿಯ ರೂಪಗಳು :ಮನುಷ್ಯರ ಸಾಗಾಣಿಕೆ : ಬಲವಂತವಾಗಿ ವೇಶ್ಯಾವಾಟಿಕೆ, ಕಾರ್ಮಿಕ, ಅಪರಾಧ, ಮದುವೆ ಅಥವಾ ಅಂಗಾಂಗ ತೆಗೆಯುವಿಕೆ ಮುಂತಾದ ಉದ್ದೇಶಗಳಿಗಾಗಿ ಜನರನ್ನು ಶೋಷಿಸಿ ಹಿಂಸಾಚಾರ, ಬೆದರಿಕೆ ಅಥವಾ ದಬ್ಬಾಳಿಕೆ ನಡೆಸುವುದು.ಶಿಕ್ಷೆ ನೀಡುವ ಬೆದರಿಕೆ ಹಾಕಿ ಜನರಿಂದ ಅವರ ಇಚ್ಛೆಗೆ ವಿರುದ್ಧ ಕೆಲಸವನ್ನು ಮಾಡುವಂತೆ ಒತ್ತಾಯಿಸುವುದು.

ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿರುವ ಗುಲಾಮಗಿರಿಯ ರೂಪ ಇದಾಗಿದೆ. ಬಡತನದಲ್ಲಿ ಸಿಲುಕಿರುವ ಜನರು ಹಣವನ್ನು ಸಾಲವಾಗಿ ಪಡೆಯುತ್ತಾರೆ. ಬಳಿಕ ಈ ಸಾಲವನ್ನು ತೀರಿಸಲು ಅವರನ್ನು ಕೆಲಸ ಮಾಡುವಂತೆ ಒತ್ತಾಯಿಸುವುದು.ಮಕ್ಕಳ ಗುಲಾಮಗಿರಿ : ಮಗುವನ್ನು ಬೇರೊಬ್ಬರ ಲಾಭಕ್ಕಾಗಿ ಬಳಸಿಕೊಳ್ಳುವುದು. ಇದರಲ್ಲಿ ಮಕ್ಕಳ ಕಳ್ಳಸಾಗಣೆ, ಬಾಲ ಸೈನಿಕರು, ಬಾಲ್ಯವಿವಾಹ ಮತ್ತು ಮಕ್ಕಳ ದೇಶೀಯ ಗುಲಾಮಗಿರಿ ಸೇರಿವೆ.ಬಲವಂತವಾಗಿ ಬೇಗ ಮದುವೆ ಮಾಡುವುದು. ಯಾರಾದರೂ ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾದಾಗ ಮತ್ತು ಅದನ್ನು ತಿರಸ್ಕರಿಸಲು ಸಾಧ್ಯವಿಲ್ಲದ್ದಾಗ ಅದು ಕೂಡ ಗುಲಾಮಗಿರಿ ಎನಿಸಿಕೊಳ್ಳುತ್ತದೆ. ಹೆಚ್ಚಿನ ಬಾಲ್ಯ ವಿವಾಹಗಳನ್ನು ಗುಲಾಮಗಿರಿ ಎಂದು ಪರಿಗಣಿಸಬಹುದು.

ಅಂದಾಜು 40.3 ಮಿಲಿಯನ್ ಜನರು ಆಧುನಿಕ ಗುಲಾಮಗಿರಿಯಲ್ಲಿದ್ದಾರೆ. ಇದರಲ್ಲಿ ಬಲವಂತದ ಕಾರ್ಮಿಕರು 24.9 ಮತ್ತು ಬಲವಂತದ ವಿವಾಹದಲ್ಲಿ 15.4 ಮಿಲಿಯನ್ ಜನರು ಇದ್ದಾರೆ. ವಿಶ್ವದ ಪ್ರತಿ 1,000 ಜನರಿಗೆ ಆಧುನಿಕ ಗುಲಾಮಗಿರಿಗೆ 5.4ರಷ್ಟು ಜನ ಬಲಿಪಶುಗಳಾಗುತ್ತಿದ್ದಾರೆ. ಆಧುನಿಕ ಗುಲಾಮಗಿರಿಗೆ 4 ರಲ್ಲಿ 1 ಮಗು ಬಲಿಯಾಗುತ್ತಿದೆ.