ಅಂತಾರಾಷ್ಟ್ರೀಯ ಕಲಾವಿದರಿಂದ ಸತ್ಕಾರ

ಕಲಬುರಗಿ,ಜ.16-ಬೆಂಗಳೂರಿನ ಕಲ್ಯಾಣ ನಗರದ ಜ್ಞಾನಸೌಧ ಸಭಾಂಗಣದಲ್ಲಿ ನಡೆದ ಬೆಂಗಳೂರಿನ ಸ್ವರತರಂಗ ಸಂಗೀತ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ ಸ್ವರಸಂಭ್ರಮ ಕಾರ್ಯಕ್ರಮದಲ್ಲಿ ಕಿರುತೆರೆ ಕಲಾವಿದ, ಉತ್ತಮ ವಾಗ್ಮಿ , ಯುವ ಸಾಹಿತಿ, ಕಲ್ಯಾಣ ಕರ್ನಾಟಕದ ಆಳಂದ ತಾಲ್ಲೂಕಿನ ಸುಂಟನೂರ ಗ್ರಾಮದ ಬಂಡಯ್ಯ ಶಾಸ್ತ್ರಿಗಳು ಹಿರೇಮಠ ಅವರಿಗೆ ಅಂತಾರಾಷ್ಟ್ರೀಯ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಎಂ ವೆಂಕಟೇಶ್ ಕುಮಾರ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಪಂ.ರವೀಂದ್ರ ಯಾವಗಲ್, ಪಂ. ಪಂಚಾಕ್ಷರಿ ಹಿರೇಮಠ ಸ್ವರತರಂಗ ಸಂಗೀತ ಶಾಲೆಯ ಸಂಸ್ಥಾಪಕರಾದ ಭಗವಂತ ಅಲ್ಲಾಪುರ ಅವರು ಅಭಿನಂದನಾÀ ಪತ್ರ ನೀಡಿ ಸನ್ಮಾನಿಸಿದರು.