ಅಂತಾರಾಷ್ಟ್ರೀಯ ಉರ್ದು ಪತ್ರಿಕೋದ್ಯಮ ಸಮ್ಮೇಳನಕ್ಕೆ ಹಿರಿಯ ಪತ್ರಕರ್ತ ರಫೀ ಭಂಡಾರಿ

ವಿಜಯಪುರ : ನ.13:ಹೈದರಾಬಾದ್‍ನಲ್ಲಿ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಉರ್ದು ಪತ್ರಿಕೋದ್ಯಮ ಸಮ್ಮೇಳನಕ್ಕೆ ವಿಜಯಪುರದ ಹಿರಿಯ ಪತ್ರಕರ್ತ ರಫೀ ಭಂಡಾರಿ ವಿಶೇಷ ಆಮಂತ್ರಿತರಾಗಿ ಭಾಗವಹಿಸುತ್ತಿದ್ದಾರೆ.

ದೇಶದ ಪ್ರತಿಷ್ಠಿತ ಮೌಲಾನಾ ಆಜಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ನೇತೃತ್ವದಲ್ಲಿ ಈ ಮೂರು ದಿನಗಳ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಪ್ರಪಂಚದ ನಾನಾ ಭಾಗಗಳಿಂದ ಉರ್ದು ಪತ್ರಿಕೋದ್ಯಮಿಗಳು, ಪತ್ರಕರ್ತರು ಆಗಮಿಸಿ ತಮ್ಮ ವಿಚಾರ ಮಂಡಿಸಲಿದ್ದಾರೆ. ಈ ಅಪೂರ್ವ ಸಮ್ಮೇಳನಕ್ಕೆ ವಿಜಯಪುರದ ಹಿರಿಯ ಪತ್ರಕರ್ತ ರಫೀ ಭಂಡಾರಿ ಸಹ ವಿಶೇಷ ಆಮಂತ್ರಿತರಾಗಿ ಭಾಗವಹಿಸುತ್ತಿದ್ದಾರೆ.

ಉರ್ದು ಪತ್ರಕರ್ತರಾಗಿ ಅನೇಕ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಭಂಡಾರಿ ಅವರು ಉರ್ದು ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.