ಅಂತಾರಾಷ್ಟ್ರೀಯ ಅತ್ಯುತ್ತಮ ಚಿತ್ರಕಲಾ ಪ್ರಶಸ್ತಿ ಪುರಷ್ಕøತ ಡಾ.ಎಸ್.ಎಂ.ನೀಲಾಗೆ ಗೌರವ

ಕಲಬುರಗಿ:ಏ.30: ಇತ್ತಿಚಿಗೆ ನೇಪಾಳದ ಕಠ್ಮಂಡುವಿನ ಸೋಂಜಾ ಆರ್ಟ್ ಗ್ಯಾಲರಿಯಲ್ಲಿ ಜರುಗಿದ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದ ಕಲಬುರಗಿಯ ಪ್ರಸಿದ್ದ ಚಿತ್ರಕಲಾವಿದರಾದ ಡಾ.ಸುಬ್ಬಯ್ಯ ಎಂ.ನೀಲಾ ಅವರು ರಚಿಸಿದ ಚಿತ್ರ ಕಲಾಕೃತಿಗೆ ‘ಅತ್ಯುತ್ತಮ ಚಿತ್ರಕಲಾಕೃತಿ’ ಪ್ರಶಸ್ತಿ ದೊರೆತ ಪ್ರಯುಕ್ತ ನಗರದ ಮಹಾಲಕ್ಷ್ಮೀ ನಗರದಲ್ಲಿರುವ ‘ನೀಲಾ ಆಟ್ರ್ಸ್ ಸ್ಟುಡಿಯೋ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಸತ್ಕರಿಸಿ, ಅಭಿನಂದಿಸಲಾಯಿತು.
ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಮಾಜ ಸೇವಕ ಲಕ್ಷ್ಮೀಕಾಂತ ತಡಕಲ್, ಇಂಡಿಯನ್ ರಾಯಲ್ ಅಕಾಡೆಮಿಯ ಅಧ್ಯಕ್ಷ ಡಾ.ರೆಹಮಾನ್ ಪಟೇಲ್, ಚಿತ್ರ ಕಲಾವಿದ ಸೈಯದ್ ಮುಸ್ತಫಾ, ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕ ಸೈಯದ್ ಹಮೀದ್, ನೀಲಾ ಕುಂಟುಂಬದ ಸದಸ್ಯರು, ಇನ್ನಿತರರು ಪಾಲ್ಗೊಂಡಿದ್ದರು.