ಅಂತಾರಾಷ್ಟಿçÃಯ ಸಾಕ್ಷರತಾ ದಿನಾಚರಣೆ ಜನ ಜಾಗೃತಿ ಕಾರ್ಯಕ್ರಮ

ಚಿತ್ರದುರ್ಗ. ಸೆ.೯; ಬಡವರ ಮಕ್ಕಳಿಗೆ ಶಿಕ್ಷಣ ನೀಡಲೂ ಎಲ್ಲರ ಸಹಕಾರ ಅಗತ್ಯ. ಪ್ರತಿ ಮಗು ಸಹ ಶಿಕ್ಷಿತವಾಗಬೇಕು, ಭಾರತದ ಬಡತನ ನಿವಾರಣೆಗೆ ಪರಿಹಾರ ಉತ್ತಮ ಶಿಕ್ಷಣ ಒಂದೇ. ರೋಟರಿ ಕ್ಲಬ್‌ನ ಉದ್ದೇಶ ಭಾರತ ದೇಶದಲ್ಲಿ ಸಾಕ್ಷರತೆ ಹೆಚ್ಚಿಸುವುದರ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ, ಬಾಲ್ಯವಿವಾಹ ಪದ್ಧತಿಯನ್ನು ನಿವಾರಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಪೋಷಕರನ್ನು ಜಾಗ್ರತಗೊಳಿಸಬೇಕಾಗಿದೆ. ಅವರ ಶಿಕ್ಷಣದ ಬಗ್ಗೆಯೂ ಜಾಗೃತಗೊಳಿಸಬೇಕಿದೆ ಎಂದು ರೋಟರಿ ಅಧ್ಯಕ್ಷರಾದ ಶ್ರೀಮತಿ ರೊ. ರಾಜೇಶ್ವರೀ ಸಿದ್ದರಾಮ್ ಮಾತನಾಡಿದರು.ಅವರು ನಗರದ ಡಿ.ಸಿ ವೃತ್ತದ ಬಳಿ ರೋಟರಿ ಕ್ಲಬ್, ರೋಟರಿ ವಿದ್ಯಾ ಶಾಲೆ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಹಯೋಗದೊಂದಿಗೆ ಆಯೋಜಿಸಿದ್ದ “ಅಂತಾರಾಷ್ಟಿçÃಯ ಸಾಕ್ಷರತಾ ದಿನಾಚರಣೆ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಾಕ್ಷರತಾ ಅಧ್ಯಕ್ಷರಾದ ರೋ. ವೀರೇಶ್‌ರವರು ಉದ್ಗಾಟಿಸಿ ಮಾತನಾಡಿ, ಪ್ರತಿವರ್ಷ ಸೆಪ್ಟೆಂಬರ್ 8ನೇ ತಾರೀಕ್‌ರಂದು ಸಾಕ್ಷರತಾ ದಿನವನ್ನು ಆಚರಿಸುತ್ತೇವೆ. ಎಲ್ಲಾ ಮಕ್ಕಳಿಗೆ ಕಲಿಕೆಯ ಅವಕಾಶವನ್ನು ನೀಡಿ ಸಾಕ್ಷರತೆ ಹೆಚ್ಚಿಸಬೇಕು ಎಂದರು.ರೋಟರಿ ಕ್ಲಬ್‌ನ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ಎನ್. ಸವಿತಾ ನಾಗೇಶ್‌ರವರು ಮಾತನಾಡಿ ಪ್ರತಿ ಹೆಣ್ಣು ವಿದ್ಯೆ ಕಲಿತರೆ, ಅದರಿಂದ ನಾಡು ಬೆಳೆಯುತ್ತದೆ, ನಾರಿ ಕಲಿತರೆ ನಾಡು ಬೆಳಗಿತು ಎಂದರು.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ಮಾತನಾಡಿ ಜನಸಾಮಾನ್ಯರಿಗೆ ಓದು ಬರಹ ಕಲಿಸಿ, ಸಾಕ್ಷರತೆಯನ್ನು ಹೆಚ್ಚಿಸಬೇಕಾಗಿದೆ. ಜನರ ಶೋಷಣೆಗೆ ಸಾಕ್ಷರತೆ ಒಂದೇ. ಕರೋನದಿಂದ ಶಾಲೆಗಳು ಮುಚ್ಚಿರುವುದರಿಂದ, ಮಕ್ಕಳಿಗೆ ವಿದ್ಯಾಭ್ಯಾಸದ ಮೇಲೆ ತೊಂದರೆಯಾಗಿದೆ, ನಾವು ಆದಷ್ಟು ಬೇಗ ಶಿಕ್ಷಣದ ದಾರಿಗೆ ಮಕ್ಕಳನ್ನ ತರಬೇಕಾಗಿದೆ ಎಂದರು.ಕುಮಾರಿ ಎಚ್. ಎಸ್. ರಚನಾ ಸಾಕ್ಷರತೆ ಬಗ್ಗೆ ನಲಿಯೋಣ ಬಾ, ಕುಣಿಯೋಣ ಬಾ, ಮಕ್ಕಳ ಗೀತೆಯನ್ನು ಹಾಡಿ ಮನರಂಜಿಸಿದರು. ಕಾರ್ಯಕ್ರಮದಲ್ಲಿ ರೋ. ವೈ. ಚಂದ್ರಶೇಖರಯ್ಯ, ಜಿ.ಐ. ವಿಶ್ವನಾಥ್, ಅಸಿಸ್ಟೆಂಟ್ ಗವರ್ನರ್ ಟಿ.ವಿ. ಸ್ವಾಮಿ, ಎಂ. ಸಿ. ವೆಂಕಟೇಶ್, ಕೆಜೆವಿಎಸ್‌ನ ಉಪಾಧ್ಯಕ್ಷರಾದ ಜಯದೇವ ಮೂರ್ತಿ, ಮ್ಯಾನೇಜರ್ ಪಾಷಾ, ಶಿಕ್ಷಕರು, ಸಿಬ್ಬಂದಿ ವರ್ಗದವರು, ರೋಟರಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.