ಅಂತಾರಾಜ್ಯ ಬೈಕ್ ಕಳ್ಳರ ಸೆರೆ ೬ಲಕ್ಷ ಮಾಲು ವಶ

ಬೆಂಗಳೂರು,ಮಾ.೩೧-ನಗರದ ವಿವಿಧೆಡೆ ಲಾಕ್ ಮುರಿದು ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರಪತ್ತೂರು ಜಿಲ್ಲೆಯ ಜೋಲಾರ್‌ಪೇಟೆ ತಾಲೂಕಿನ ಪಾಲಂಗೊಪ್ಪಂ ನ ತಬಾರಕ್ (೨೨) ಹಾಗೂ ಜೋಲಾರ್‌ಪೇಟೆ ನಿವಾಸಿ ಮಹಮ್ಮದ್ ಶರೀಫ್ (೨೭) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ೬ ಲಕ್ಷ ರೂ. ಮೌಲ್ಯದ ೧೦ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.
ಆರೋಪಿಗಳು ತಿರುಪತ್ತೂರಿನಿಂದ ಬಸ್ ಮತ್ತು ಅಲ್ಲಿ ಕಳವು ಮಾಡಿದ ಬೈಕ್‌ಗಳಲ್ಲಿ ರಾತ್ರಿ ವೇಳೆ ಬೊಮ್ಮನಹಳ್ಳಿಗೆ ಬಂದು ಮನೆಗಳ ಮುಂದೆ ನಿಲ್ಲಿಸಿರುವ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು.
ಬೆಲೆ ಬಾಳುವ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಹ್ಯಾಂಡಲ್ ಲಾಕ್ ಮುರಿದು, ವೈರ್‌ಗಳನ್ನು ಡೈರೆಕ್ಟ್?? ಮಾಡಿ ಕಳವು ಮಾಡುತ್ತಿದ್ದ ಖಚಿತ ಮಾಹಿತಿ ಅಧರಿಸಿ ಬಂಡೇಪಾಳ್ಯ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡಿನಲ್ಲಿ ಕಳವು ಮಾಡಿದ ಬೈಕ್‌ಗಳನ್ನು ಕರ್ನಾಟಕದಲ್ಲಿ ಹಾಗೂ ಕರ್ನಾಟಕದಲ್ಲಿ ಕಳವು ಮಾಡಿದ ಬೈಕ್‌ಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುವ ಬಗ್ಗೆ ಸಂಚು ರೂಪಿಸಿದ್ದನ್ನು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಬಂಡೇಪಾಳ್ಯ ಠಾಣೆ ಇನ್ಸ್??ಸ್ಪೆಕ್ಟರ್ ಯೋಗೇಶ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದೆ.