ಅಂತಾಪುರ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ


ಸಂಜೆವಾಣಿ ವಾರ್ತೆ
ಸಂಡೂರು:ಅ:7:   ತಾಲೂಕಿನ ಅಂತಾಪುರ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್.ಹೊನ್ನೂರಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಶೇಖ್ ಅಹ್ಮದ್ ಘೋಷಿಸಿದರು.
ಅಂತಾಪುರ ಗ್ರಾಮ ಪಮಚಾಯಿತಿ 2ನೇ ಅವಧಿಗೆ ಅಧ್ಯಕ್ಷ ಹುದ್ದೆಗೆ ಎನ್.ಹೊನ್ನೂರಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಹನುಮಕ್ಕ ಆಯ್ಕೆಯಾಗಿದ್ದಾರೆಂದು ಎಂದು ಘೋಷಿಸಿದರು.
ಅಧ್ಯಕ್ಷ ಹುದ್ದೆಯು ಅನುಸೂಚಿತ ಪಂಗಡ ಮೀಸಲಾತಿ, ಉಪಾಧ್ಯಕ್ಷ ಹುದ್ದೆಗೆ ಅನುಸೂಚಿತ ಪಂಗಡ ಮಹಿಳೆಗೆ  ನಿರ್ಧರಿತವಾಗಿತ್ತು, ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದರೆ ಉಪಾಧ್ಯಕ್ಷ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯಿತಿ  ಅಭಿವೃದ್ದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಗ್ರಾಮಪಂಚಾಯಿತಿ ಸದಸ್ಯರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚುನಾವಣಾಧಿಕಾರಿ ಶೇಖ್ ಅಹ್ಮದ್ ಉಪಸ್ಥಿತರಿದ್ದರು.

One attachment • Scanned by Gmail