ಅಂತರ ವಿಶ್ವವಿದ್ಯಾಲಯ ಬಾಸ್ಕೆಟ್ ಬಾಲ್ ಪಂದ್ಯಾಟಕ್ಕೆ ಗುವಿವಿ ತಂಡ

ಕಲಬುರಗಿ,ನ.11-ಇದೇ ತಿಂಗಳು 13 ರಿಂದ 18 ರವರೆಗೆ ಕೇರಳಾ ವಿಶ್ವವಿದ್ಯಾಲಯ ತಿರುವನಂತಪುರಂ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಬಾಸ್ಕೆಟ್ ಬಾಲ್ (ಪುರುಷ) ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಬಾಸ್ಕೆಟ್ ಬಾಲ್ (ಪುರುಷ) ತಂಡವು ಭಾಗವಹಿಸುತ್ತಿದೆ.
ತಂಡದ ನಾಯಕನಾಗಿ ಚಂದ್ರಶೇಖರ, ತಂಡದ ಸದಸ್ಯರಾಗಿ ಹಣಮಂತರಾಯ, ಸಿದ್ದಾರಾಮ, ಮಲ್ಲಿಕಾರ್ಜು, ಸಮರ್ಥ, ಹಸನ, ಶಂಕರಲಿಂಗ, ಜೆಮ್ಸ್, ದಶರಥ, ಸಿದ್ರಾಮ ರೋಶನ್, ಮತ್ತು ಸುರಜಕುಮಾರ ಭಾಗವಹಿಸುವರು. ತಂಡದ ವ್ಯವಸ್ಥಾಪಕರಾಗಿ/ತರಬೇತುದಾರರಾಗಿ ದೈಹಿಕ ಶಿಕ್ಷಣ ವಿಭಾಗದ ಶಂಕರ ಸೂರೆ ಅವರು ಭಾಗವಹಿಸುವರು.
ತಂಡದ ಯಶಸ್ವಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರದಯಾನಂದ ಅಗಸರ, ಕುಲಸಚಿವ ಡಾ.ಬಿ.ಶರಣಪ್ಪ, ಡಾ.ಎನ್.ಜಿ.ಕಣ್ಣೂರ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎಚ್.ಎಸ್.ಜಂಗೆ, ಸಂಯೋಜಕರು ಮತ್ತು ಪ್ರಾಂಶುಪಾಲರಾದ ಡಾ.ಚಂದ್ರಕಾಂತ ಬಿರಾದಾರ, ಪ್ರಶಾಂತಕುಮಾರ ಡಿ, ಅರುಣಕುಮಾರ ಎಚ್. ಅವರು ತಂಡಕ್ಕೆ ಶುಭ ಹಾರೈಸಿದ್ದಾರೆ.