ಅಂತರ ಧರ್ಮೀಯ ದೀಪಾವಳಿ ಆಚರಿಸಿದ ಸ್ಲಂ ಮಹಿಳಾ ಸಂಘ

ವಿಜಯಪುರ, ನ.23-ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ(ರಿ), ವಿಜಯಪುರ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆ, ವಿಜಯಪುರ ಇವರ ಆಶ್ರಯದಲ್ಲಿ ನಗರದ ಹಮಾಲ ಕಾಲನಿ ಸ್ಲಂನಲ್ಲಿ ಅಂತರ ಧರ್ಮೀಯ ದೀಪಾವಳಿ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿಂದು ಧರ್ಮ ಗುರುಗಳಾದ ಪೂಜ್ಯ ಸಂಗಮೇಶ ತಾಳಿಕೋಟಿ ಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಇಸ್ಲಾಂ ಧರ್ಮ ಗುರುಗಳಾದ ಇಸ್ಮಾಯಿಲ್ ಅಬರಾರಿ ರವರು ಉಪಸ್ಥಿತರಿದ್ದರು. ಅದೇ ರೀತಿ ಕ್ರಿಶ್ಚಿಯನ್ ಧರ್ಮದ ಗುರುಗಳಾದ ಫಾದರ ಜೀವನ ಜೇಮ್ಸ್ ರವರು ಉಪಸ್ಥಿತರಿದ್ದರು. ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಹೊಸಮನಿ, ಗೃಹ ಕಾರ್ಮಿಕರ ಯೂನಿಯನ್ ಅಧ್ಯಕ್ಷರಾದ ಶ್ರೀಮತಿ ಫರ್ಜಾನಾ ಜಮಾದಾರ, ಸ್ಲಂ ಸಮಿತಿ ಅಧ್ಯಕ್ಷರಾದ ಅಕ್ರಂ ಮಾಶ್ಯಾಳಕರ, ಓಣಿಯ ಮುಖಂಡರಾದ ಸಿದ್ದಪ್ಪ ಅಳ್ಳಗಿ, ಅಟೋ ಚಾಲಕರ ಯೂನಿಯನ್ ಅಧ್ಯಕ್ಷರಾದ ಬಸವರಾಜ ಮಾಳಿ, ಸಿಸ್ಟರ್ ಅಮಲಾ, ಮುಖಂಡರಾದ ಶಫೀಕ್ ಮನಗೂಳಿ, ಹಮಾಲ ಕಾಲನಿ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು, ಓಣಿಯ ಮುಖಂಡರು, ಯುವತಿಯರು, ಇವರುಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಪ ಬೆಳೆಗಿಸುವುದರ ಮೂಲಕ ಚಾಲನೆ ನೀಡಲಾಯಿತು. ಅದೇ ರೀತಿ ಸಂವಿಧಾನ ಪೀಠಿಕೆಯ ಪ್ರಸ್ತಾವನೆ ಮೂಲಕ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹಿಂದು ಧರ್ಮ ಗುರುಗಳಾದ ಪೂಜ್ಯ ಸಂಗಮೇಶ ತಾಳಿಕೋಟಿ ರವರು ದೀಪಾವಳಿ ಹಬ್ಬವು ಜನರ ಬಾಳಲ್ಲಿ ಬೆಳಕನ್ನು ತರುವ ಹಬ್ಬವಾಗಿದೆ. ಬಡವಬಲ್ಲಿದ ಅನ್ನದೆ ಹಬ್ಬವನ್ನು ಎಲ್ಲರು ಸೇರಿ ಆಚರಿಸುವಂತಾಗಿದೆ. ಆದರೆ ಇವತ್ತಿನ ದಿನಗಳಲ್ಲಿ ಹಬ್ಬಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ಸಮಾಜದಲ್ಲಿ ಕೋಮು ಸಂಘರ್ಷಗಳು ಹೆಚ್ಚಾಗುತ್ತೀವೆ. ಜನರಲ್ಲಿ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ. ಅದೇ ಕಾರಣಕ್ಕೆ ಅನೌಪಚಾರಿಕ ಶಿಕ್ಷಣ ಸಂಸ್ಥೆ ಇಂತಹ ಸರ್ವಧರ್ಮದ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಭಾತೃತ್ವ ಭಾವನೆಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಎಲ್ಲ ಧರ್ಮದ ಮೂಲ ಉದ್ದೇಶ ಸಮಾಜದಲ್ಲಿ ಶಾಂತಿ, ಸಹಭಾಳ್ವೆ, ಸಾಮರಸ್ಯವನ್ನು ಸ್ಥಾಪಿಸುವುದಾಗಿದೆ. ನಮ್ಮ ಸಂವಿಧಾನವು ಸಹ ಎಲ್ಲ ಭಾರತೀಯರು ಸಮಾನರು ಎಂದು ಹೇಳುತ್ತದೆ ಎಂದು ಹೇಳಿದರು. ಮುಂದೆಯು ಇಂತಹ ಕಾರ್ಯಕ್ರಮಗಳು ಮುಂದುವರೆಯಲಿ ಎಂದು ಹಾರೈಸಿದರು.
ಅದೇ ರೀತಿ ಇಸ್ಲಾಂ ಧರ್ಮ ಗುರುಗಳಾದ ಇಸ್ಮಾಯಿಲ್ ಅಬರಾರಿ ರವರು ಮಾತನಾಡುತ್ತಾ, ಹಬ್ಬಗಳು ಜನರ ಬಾಳಲ್ಲಿಹೊಸ ಚೈತನ್ಯ ನೀಡುತ್ತವೆ. ದೀಪಾವಳಿ ಎಂದರೆ ಕತ್ತಲಿಂದ ಬೆಳಕಿನೆಡೆ ಸಾಗುವುದು ಎಂದರ್ಥವಾಗಿದೆ. ಮನುಷ್ಯ ಅನೇಕ ಮೌಡ್ಯತೆಗೆ ಬಲಿಯಾಗಿದ್ದಾನೆ. ಅಂತಹ ಅಂದಕಾರದಿಂದ ಹೊರೆಗೆ ಬರುವುದೆ ದೀಪಾವಳಿಯಾಗಿದೆ. ಸಂವಿಧಾನ ನೀಡಿದ ಹಕ್ಕುಗಳ ಮೂಲಕ ಸಮಾಜದಲ್ಲಿ ಸಮಾನೆಯಿಂದ, ಸಹಭಾಳ್ವೆಯಿಮದ ಬಾಳಿದಲ್ಲಿ ನಾವು ದಿನಾಲು ದೀಪಾವಳಿ ಹಬ್ಬವನ್ನು ಆಚರಿಸಬಹುದೆಂದು ತಿಳಿಸಿದರು.
ಅದೇ ರೀತಿ ಕ್ರಿಶ್ಚಿಯನ್ ಧರ್ಮ ಗುರುಗಳಾದ ಫಾದರ ಜೀವನ ಜೇಮ್ಸ್ ರವರು ಮಾತನಾಡುತ್ತಾ, ನಾವು ಪ್ರತಿ ವರ್ಷ ದೀಪಾವಳಿಯನ್ನು ಸಡಗರದಿಂದ ನಮ್ಮ ನಮ್ಮ ಮನೆಗಳಲ್ಲಿ ಆಚರಿಸುತ್ತಾ ಬಂದಿದೇವೆ. ಇದೊಂದು ಸಂಪ್ರದಾಯವಾಗಿದೆ. ಹಬ್ಬಗಳ ಜೊತೆಗೆ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಇಗೀನ ಪರಿಸ್ಥಿತಿಯಲ್ಲಿ ಎಲ್ಲ ಜಾತಿ, ಜನಾಂಗದವರು ಬೇದ, ಭಾವ ಮರೆತು ನಾವೆಲ್ಲರು ಒಂದೇ ಎಂದು ಜೀವನ ನಡೆಸುವುದು ಬಹಳ ಮುಖ್ಯವಾಗಿದೆ. ಮುಂದಿನ ಪಿಳೀಗೆಗೆ ನಮ್ಮ ಸಂಸ್ಕøತಿ, ಸಂಪ್ರದಾಯ ಉಳಿಯಬೇಕಾದರೆ ನಾವು ಒಗ್ಗಟ್ಟಾಗಿ ಬಾಳುವುದನ್ನ ಕಲಿಯಬೇಕು ಅಂದಾಗ ಮಾತ್ರ ನವಭಾರತ, ಸಮಾನತೆ ಭಾರತ, ಭಾತೃತ್ವ ಭಾರತ ನಿರ್ಮಾಣವಾಗಲು ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶಶಿಕಲಾ ದೊಡಮನಿ, ಸ್ವಾಗತ ಶ್ರೀಮತಿ ಗೀತಾ ಪಾಟೀಲ್, ವಂದನಾರ್ಪಣೆಯನ್ನು ಶ್ರೀಮತಿ ಗೀತಾ ಕಟ್ಟಿರವರು ನಡೆಸಿಕೊಟ್ಟರು