ಅಂತರ ಕಾಲೇಜು ವಲಯ ಪುರುಷರ ಕ್ರೀಡಾಕೂಟಕ್ಕೆ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.08:- ಮೈಸೂರು ವಿಶ್ವವಿದ್ಯಾನಿಲಯದ 2023-24ನೇ ಸಾಲಿನ ಅಂತರ ಕಾಲೇಜು ಅಂತರ ವಲಯ ಪುರುಷರ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗವು ಮೂರು ದಿನಗಳ ಕಾಲ ಸ್ಪೋಟ್ರ್ಸ್‍ಪೆವಿಲಿಯನ್‍ನಲ್ಲಿ ಆಯೋಜಿಸಿರುವ ಈ ಕ್ರೀಡಾಕೂಟಕ್ಕೆ ಮೈವಿವಿ ಪಿಎಂಇಬಿ ಮುಖ್ಯಸ್ಥ ಪೆÇ್ರ. ನಾಗರಾಜು ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಕ್ರೀಡೆಯಲ್ಲಿ ,ಸೋಲು- ಗೆಲವು ಮುಖ್ಯವಲ್ಲ. ಕ್ರೀಡಾಸ್ಫೂರ್ತಿಯಿಂದ ಭಾಗವಹಿಸುವುದು. ಯುವಕರು ಕ್ರೀಡೆಯಲ್ಲಿ ಭಾಗವಹಿಸುವುದರ ಜೊತೆಗೆ ಪರಿಸರದ ಬಗ್ಗೆ ಕೂಡ ಕಾಳಜಿ ವಹಿಸಬೇಕು. ಕ್ರೀಡಾಕೂಟದ ಸವಿಪಿನಲ್ಲಿ ಪ್ರತಿಯೊಂದು ಕಾಲೇಜಿನಲ್ಲಿ ಕೂಡ ಒಂದು ಗಿಡವನ್ನು ನೆಡಬೇಕು ಎಂದು ಸಲಹೆ ಮಾಡಿದರು.
ಮುಖ್ಯಅತಿಥಿಯಾಗಿದ್ದ ಕ್ರಿಕೆಟ್‍ಆಟಗಾರರೂ ಆದ ಕೇಂದ್ರ ಅಬ್ಕಾರಿ ಮತ್ತು ಸುಂಕ ಇಲಾಖೆ ಅಧೀಕ್ಷಕ ಎ.ವಿ. ಸಂದೀಪ್‍ಮಾತನಾಡಿ, ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ನಾನು ಕ್ರಿಕೆಟ್‍ನಲ್ಲಿ ಹಲವಾರು ಪಂದ್ಯಾವಳಿಗಳಲ್ಲೂ ಭಾಗವಹಿಸಿದ್ದೆ. ರಣಜಿ ತಂಡಕ್ಕೂ ಕೂಡ ಆಯ್ಕೆಯಾಗಿದ್ದ. 20 ವರ್ಷಗಳ ಹಿಂದೆ ನಿಮ್ಮಂತೆ ಮೈದಾನದಲ್ಲಿ ಕುಳಿತಿದ್ದ ನಾನು ಇವತ್ತು ವೇದಿಕೆ ಏರಲು ಕ್ರೀಡೆಯೇ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಪಠ್ಯದ ಜೊತೆಗೆ ಕ್ರೀಡೆಯಲ್ಲಿ ಕೂಡ ಭಾಗವಹಿಸಿ, ಸಾಧಕರಾಗಬೇಕು ಎಂದು ಕರೆ ನೀಡಿದರು.
ಮತ್ತೊರ್ವ ಮುಖ್ಯಅತಿಥಿಯಾಗಿದ್ದ ಮೈವಿವಿ ಕ್ರೀಡಾ ಮಂಡಳಿ ಸದಸ್ಯರೂ ಆದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂದರು ಕಾಮನ್‍ವೆಲ್ತ್‍ಗೇಮ್ಸ್‍ನಲ್ಲಿ ಕೂಡ ಭಾರತೀಯರು ಪದಕಗಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಸಿನಿಮಾ ತಾರೆಯರನ್ನು ಹೊರತುಪಡಿಸಿದರೆ ಕ್ರೀಡಾಪಟುಗಳಿಗೆ ಹೆಚ್ಚಿನ ಅಭಿಮಾನಿಗಳು ಇರುತ್ತಾರೆ. ಕ್ರೀಡಾ ಸಾಧಕರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಕೂಡ ಮೀಸಲಾತಿ ಇದ್ದು, ಇದರ ಪ್ರಯೋಜನ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಮಾತನಾಡಿ, ಮೈಸೂರು ವಿವಿ ವಿಭಜನೆಯಾಗಿರುವುದರಿಂದ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವ ಕೊನೆಯ ಕ್ರೀಡಾಕೂಟ ಇದಾಗಬಹುದು. ಕಾಲೇಜು ಮಟ್ಟದಲ್ಲಿ ಮತ್ತೊಂದು ಕ್ರೀಡಾಕೂಟ ನಡೆಯಬಹುದು. ಆದ್ದರಿಂದ ಇಂತಹ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ ಎಂದರು.
ಉಪ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಮಾತನಾಡಿ, ಈ ಕ್ರೀಡಾಕೂಟದಲ್ಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ 40 ಕಾಲೇಜುಗಳಿಂದ 800 ಮಂದಿ ಪಾಲ್ಗೊಂಡಿದ್ದರು.15 ವಿವಿಧ ಕ್ರೀಡೆಗಳು ನಡೆಯಲಿವೆ. ದೈಹಿಕ ಶಿಕ್ಷಣ ವಿಭಾಗದ ಅಧ್ಯಾಪಕರು, ಅಧ್ಯಾಪಕೇತರರು, ತರಬೇತುದಾರರು, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಇದ್ದರು.