ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ

ದಾವಣಗೆರೆ.ಜ.೧೦; ದಾವಣಗೆರೆ ವಿಶ್ವವಿದ್ಯಾಲಯ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ತಂಡ ಆಯ್ಕೆಯು ಹೋಚಿ ಬೋರಯ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕಲಾ ಮತ್ತು ವಾಣಿಜ್ಯ  ಪ್ರಥಮ ದರ್ಜೆ ಕಾಲೇಜು ಜಗಳೂರಿನಲ್ಲಿ ನಡೆಯಿತು  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ತಂಡದ ನಾಯಕನಾಗಿ ನವೀನ್ ಕುಮಾರ್ ಜಿ ಬಿ ತಂಡದಲ್ಲಿ ಎಂ ಕೆ ಸಾಧಿಕ್ ಮಾರುತಿ ಎಸ್ ಹೆಚ್, ಅರುಣ ಕೆ, ನಾಸಿರ್ ಹುಸೇನ್ ಎಸ್ ಕರಿಯಪ್ಪ ಡಿ.ಎಂ ,ಸಚಿನ್ ಸತೀಶ್, ದೇವರಾಜ್ ಭಾಗವಹಿಸಿ ನಮ್ಮ ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರಿಗೆ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಂಜನಪ್ಪ ಎಸ್ ಆರ್, ದೈಹಿಕ ಶಿಕ್ಷಣ ನಿರ್ದೇಶಕರಾದಂತಹ ಡಾ. ರೇಖಾ ಎಂ ಆರ್ ,   ಡಾ.ಏಸುದಾಸ್ ಹಾಗೂ ಕ್ರೀಡಾ ಸಮಿತಿಯ ಎಲ್ಲಾ ಸದಸ್ಯರುಗಳು ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.