ಅಂತರ್ ಶಾಲಾ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ವಿಜೇತರು

ಕಲಬುರಗಿ:ಜ.10:ಜ. 03, 04 & 06, 2024 ರಂದು ಮೂರೂ ದಿನಗಳ ಅಂತರ್ ಶಾಲಾ ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳನ್ನು ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಮೂರೂ ವಿಭಾಗಗಳಲ್ಲಿ ಏರ್ಪಡಿಸಲಾಗಿತ್ತು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಮತ್ತು ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ವಿವಿಧ ಶಾಲೆಗಳು, ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಪ್ರತಿ ವಿಭಾಗದ ಸ್ಪರ್ಧೆಯಲ್ಲಿ ಸರಿಸುಮಾರು 60 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಕೊಟ್ಟಂತಹ ಪದಗಳ ಸರಿಯಾದ ಸ್ಪೆಲ್ಲಿಂಗ್ ಹೇಳುವ ಸ್ಪರ್ಧೆ ಇದಾಗಿತ್ತು. ಸ್ಪರ್ಧಾಳುಗಳ ಉತ್ತಮ ತಯ್ಯಾರಿ ಮತ್ತು ಉತ್ಸಾಹ ಈ ಸ್ಪರ್ಧೆಯ ವಿಶೇಷತೆಯಾಗಿತ್ತು. ತಪ್ಪು ಸ್ಪೆಲ್ಲಿಂಗ್ ಹೇಳಿದ ಸ್ಪರ್ಧಾಳುಗಳು ಸ್ಪರ್ಧೆಯಿಂದ ಹೊರಗಾದರು. ಹೀಗೆ 20 ರಿಂದ 25 ಸುತ್ತಿನವರೆಗೆ ನಡೆದ ಈ ಸ್ಪರ್ಧೆಯಲ್ಲಿ, ಕೊನೆಗೆ ಉಳಿದ ಮೂರೂ ಸ್ಪರ್ಧಾಳುಗಳನ್ನು ಮೆಚ್ಚುಗೆಯ ಪ್ರಮಾಣಪತ್ರ, ಪಾರಿತೋಷಕ ಮತ್ತು ನಗದು ಬಹುಮಾನ (ಪ್ರಥಮ ಸ್ಥಾನ: ರೂ. 10000/-, ದ್ವಿತೀಯ ಸ್ಥಾನ: ರೂ. 7000/- & ತೃತೀಯ ಸ್ಥಾನ: ರೂ. 4000/-) ನೀಡಿ ಗೌರವಿಸಲಾಯಿತು.
ದಿನಾಂಕ 03-01-2024 ರಂದು ನೆಡದ ಪ್ರಾಥಮಿಕ ವಿಭಾಗದ (3 ರಿಂದ 5 ನೇಯ ತರಗತಿವರೆಗೆ) ವಿಜೇತರು ಈ ರೀತಿಯಾಗಿದ್ದರೆ.

 1. ಪ್ರಥಮ ಸ್ಥಾನ: ಕುಮಾರಿ ಸಾನ್ವಿ ಮಾಚೆಟ್ಟಿ (ಅಪ್ಪಾ ಪಬ್ಲಿಕ್ ಶಾಲೆ – 3ನೇಯ ತರಗತಿ)
 2. ದ್ವಿತೀಯ ಸ್ಥಾನ: ಕುಮಾರ ಆಯುಷ್ bisತಿಚಿs (ಆದಿತ್ಯ ಬಿರ್ಲಾ ಪಬ್ಲಿಕ್ ಸ್ಕೂಲ್ – 5 ನೇಯ ತರಗತಿ)
 3. ತೃತೀಯ ಸ್ಥಾನ: ಕುಮಾರಿ ಅದಿಥಿ ಅಂಜುಟಗಿ (ಅಪ್ಪಾ ಪಬ್ಲಿಕ್ ಶಾಲೆ – 4ನೇಯ ತರಗತಿ)
 4. ಸಮಗ್ರ ಪ್ರಶಸ್ತಿ: ಅಪ್ಪಾ ಪಬ್ಲಿಕ್ ಶಾಲೆ, ಕಲಬುರಗಿ.

ದಿನಾಂಕ 04-01-2024 ರಂದು ನೆಡದ ಹಿರಿಯ ಪ್ರಾಥಮಿಕ ವಿಭಾಗದ (6 ರಿಂದ 9ನೇಯ ತರಗತಿವರೆಗೆ) ವಿಜೇತರು ಈ ರೀತಿಯಾಗಿದ್ದರೆ. ಈ ವಿಭಾಗದ ವಿಜೇತರಿಗೆ ಶ್ರೀ ಧನರಾಜ್ ಧೋಕಾ (ಛೇರ್ಮನ್, ಮ್ಯಾನೇಜ್ಮೆಂಟ್ ಟ್ರಸ್ಟ್, ಶ್ರೀ.ಪಿ.ಯಸ್.ಧೋಕಾ ಜೈನ ಸ್ಕೂಲ್, ಯಾದಗಿರಿ) ಇವರು ನಗದು ಬಹುಮಾನವನ್ನು ಪ್ರಾಯೋಜಿಸಿದರು.

 1. ಪ್ರಥಮ ಸ್ಥಾನ: ಕುಮಾರ ಆರ್ನೆಷ್ ಕುಂದು (ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆ – 08ನೇಯ ತರಗತಿ)
 2. ದ್ವಿತೀಯ ಸ್ಥಾನ: ಕುಮಾರ ಯೆರ್ರಾ ಗೌತಮ್ ಸಾಯೀ (ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆ – 8ನೇಯ ತರಗತಿ)
 3. ತೃತೀಯ ಸ್ಥಾನ: ಕುಮಾರ ಕುಶಾಲ ಕುಂಬಾರ (ಅಪ್ಪಾ ಪಬ್ಲಿಕ್ ಶಾಲೆ – 8ನೇಯ ತರಗತಿ)
 4. ಸಮಗ್ರ ಪ್ರಶಸ್ತಿ: ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆ, ಆದಿತ್ಯ ನಗರ, ಮಲಖೇಡ್. ದಿನಾಂಕ 05-01-2024 ರಂದು ನೆಡದ ಪ್ರೌಢ ವಿಭಾಗದ (6 ರಿಂದ 9ನೇಯ ತರಗತಿವರೆಗೆ) ವಿಜೇತರು ಈ ರೀತಿಯಾಗಿದ್ದರೆ.
 5. ಪ್ರಥಮ ಸ್ಥಾನ: ಕುಮಾರ ವೀರ ಕೆ. ರತ್ಕಲ್ (ಅಪ್ಪಾ ಪಬ್ಲಿಕ್ ಶಾಲೆ – 10ನೇಯ ತರಗತಿ)
 6. ದ್ವಿತೀಯ ಸ್ಥಾನ: ಕುಮಾರಿ ಅಮೂಲ್ಯ (ಷಾ. ಮಗನಲಾಲ್ ಚೆಮ್ನಾಜಿ ಜೈನ ಶಾಲೆ – 10ನೇಯ ತರಗತಿ)
 7. ತೃತೀಯ ಸ್ಥಾನ: ಕುಮಾರಿ ಮಾರಿಯ ಖತೀಜಾ (ಹುಸ್ಸೇನ್ ಪಬ್ಲಿಕ್ ಶಾಲೆ – 9ನೇಯ ತರಗತಿ)
 8. ಸಮಗ್ರ ಪ್ರಶಸ್ತಿ: ಷಾ. ಮಗನಲಾಲ್ ಚೆಮ್ನಾಜಿ ಜೈನ ಶಾಲೆ, ಶಹಪುರ್.