ಅಂತರ್ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿಡಾ.ಮಿಣಜಗಿಗೆ ಪ್ರಶಸ್ತಿ

ಕಲಬುರಗಿ:ಮೇ.25: ವಿಶ್ವವಿಶ್ವೇರಯ್ಯಾ ನಗರದ ನಿವಾಸಿ ಹವ್ಯಾಸಿ ಹಿರಿಯ ಛಾಯಾಗ್ರಾಹಕ ಡಾ ಎಂ.ಡಿ. ಮಿಣಜಗಿಯವರು ರೋಮೆನಿಯಾದಲ್ಲಿ ನಡೆದ 8ನೇ ಓನೆಕ್ಸ್ 2024 ಅಂತರ್ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅವರಿಗೆ ಮೂರು ಎಕ್ಸ್‍ಪ್‍ಟೇನ್ಸ್ ಪ್ರಶಸ್ತಿಗಳು ದೊರಕಿವೆ. ಒಂದು “ಕಲರ್ ಪೀಪಲ್” ಶೀರ್ಷಿಕೆ ಛಾಯಾಚಿತ್ರ “ನೃಪತುಂಗ ನಾಟಕದ ಒಂದು ಸುಂದರ ದೃಶ್ಯ” ಪ್ರಕಟಿಸಲಾಗಿದೆ. ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ ಎಂ. ಜೋಶಿ ಹರ್ಷವ್ಯಕ್ತಪಡಿಸಿದ್ದಾರೆ.