ಅಂತರ್ ರಾಜ್ಯ ವಾಹನ ಸಂಚಾರ ನಿಷೇಧ

ಲಿಂಗಸುಗೂರು.ಏ.೨೮-ತಾಲೂಕಿನಲ್ಲಿ ವಾಹನ ಸಂಚಾರ ನಿಷೇಧ ಮಾಡಲು ಹಾಗೂ ಅಂತರ್ ರಾಜ್ಯ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಹಾಗೂ ಗಡಿ ಭಾಗದಲ್ಲಿ ಪೋಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ಮಾಡಿ ವಾಹನ ಸಂಚಾರ ಮಾಡುವ ಸವಾರರಿಗೆ ಕೋವಿಡ್ ನಿಯಮ ಪ್ರಕಾರ ವಾಹನ ಸಂಚಾರ ಮಾಡುವ ಸವಾರರು ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ನಾಗಪ್ರಸಾದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ನಗರದಲ್ಲಿ ಅನಗತ್ಯವಾಗಿ ವಾಹನ ಸಂಚಾರ ಮಾಡುವ ಸವಾರರಿಗೆ ಹಾಗೂ ಅಧಿಕಾರಿಗಳ ಕಣ್ಣು ತಪ್ಪಿಸಿ
ಕೇಲವು ಅಂಗಡಿ ಮುಂಗಟ್ಟುಗಳು ಬಂದ್‌ಗೆ ಅಂಗಡಿ ಮಾಲೀಕರು ಸಹಕರಿಸದಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು
ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರಿಗೆ ಸೂಚನೆ ನಿಡಿದರು.
ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮಾಸ್ಕ್ ಧರಿಸಿ ಜೀವ ಉಳಿಸಿ. ಇದರಿಂದಾಗಿ ಕೊರೋನಾ ಎಂಬ ಮಾಹಮಾರಿ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಈ ಮುಲಕ ಸಾರ್ವಜನಿಕರಿಗೆ ಪಿಎಸ್‌ಐ ಪ್ರಕಾಶ್ ಡಂಬಳ ರವರು ಮಾಹಿತಿ ನೀಡಿದರು. ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದೆ ಆದರೆ ಸಾರ್ವಜನಿಕರು ಸರ್ಕಾರದ ನಿಯಮ ಪ್ರಕಾರ ಕೊವಿಡ್ ಮಾಹಾಮಾರಿ ರೋಗವನ್ನು ತಡೆಗಟ್ಟಲು ಕೈ ಜೋಡಿಸಿ ಸ್ಥಳೀಯ ಸಂಸ್ಥೆಗಳ ಮೂಲಕ ಆಡಳಿತ ಮಂಡಳಿಗೆ ಸಹಕಾರ ನಿಡಬೇಕು. ಎಂದು ಪುರಸಭೆ ಅಧ್ಯಕ್ಷ ಗದ್ದೆಮ್ಮಬೊವಿ ಇವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳಾದ ಶಿವಲಿಂಗ ಮೇಗಳಮನಿ, ಶಹನವಾಜ, ದೀಪಿಕಾ ಹಾಗೂ ಪೋಲೀಸ್, ಪೇದೆಗಳಾದ ನಾಗರಾಜ್,
ಚಂದ್ರು ಸೇರಿದಂತೆ ಇತರರು ಅಧಿಕಾರಿಗಳು ಇದ್ದರು.