
ಕಲಬುರಗಿ.ಮಾ.28: ಅಂತರ್ ರಾಜ್ಯದಿಂದ ಗಾಂಜಾ ಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಠಾಣೆಯ ಪೋಲಿಸರು ಓರ್ವನಿಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಗೆ ಆಳಂದ್ ತಾಲ್ಲೂಕಿನ ಕಡಗಂಚಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್ (24) ಎಂದು ಗುರುತಿಸಲಾಗಿದೆ.
ಬಂಧಿತನಿಂದ ಗಾಂಜಾ ಸಾಗಿಸಲು ಬಳಸಿದ ಐದು ಲಕ್ಷ ರೂ.ಗಳ ಮೌಲ್ಯದ ಒಂದು ಕಾರು, 1.14 ಲಕ್ಷ ರೂ.ಗಳ ಮೌಲ್ಯದ 38 ಕೆಜಿ ಗಾಂಜಾ ಪದಾರ್ಥ, ಎರಡು ಮೊಬೈಲ್ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಕ್ರೈಂ ಪೋಲಿಸ್ ಠಾಣೆಯ ಆರಕ್ಷಕ ನಿರೀಕ್ಷಕ ಸೋಮಲಿಂಗ್ ಕಿರೇದಳ್ಳಿ ಅವರು ಖಚಿತ ಭಾತ್ಮಿ ಮೇರೆಗೆ ಸಿಬ್ಬಂದಿಗಳಾದ ಸಿದ್ದಪ್ಪ, ಅಶೋಕ್, ಹಣಮಂತ್, ಸಂತೋಷ್, ಗಜಾನಂದ್, ಮುತ್ತುರಾಜ್, ಬಸವರಾಜ್, ಭೀಮಾಶಂಕರ್ ಅವರು ಕಾರ್ಯಾಚರಣೆ ಕೈಗೊಂಡು ಹುಮ್ನಾಬಾದ್ದಿಂದ ನಗರದ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಕಾರನ್ನು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಭವಾನಿ ದಾಬಾದ ಹತ್ತಿರ ತಡೆದು ಅಕ್ರಮ ಗಾಂಜಾ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯನ್ನು ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.