ಅಂತರ್ ರಾಜ್ಯ ಕಳ್ಳನ ಬಂಧನ: ನೀರಿನ ಮೋಟಾರು ಜಪ್ತಿ

ವಿಜಯಪುರ,ಆ.2- ಅಂತರ್ ರಾಜ್ಯದಲ್ಲಿ ನೀರಿನ ಪಂಪ್ಸ್ ಮೋಟಾರ್‍ಗಳ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವಿಜಯಪುರ ಜಿಲ್ಲಾ ಗಾಂಧಿಚೌಕ್ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೆರೆಯ ಮಹಾರಾಷ್ಟ್ರ ರಾಜ್ಯದ ಅಜ್ಮೀರ ನಗರ ನಿವಾಸಿಯಾದ ಸಲೀಂ ಅಜ್ಮಲ್ ಶೇಖ್ ಬಂಧಿತ ಆರೋಪಿ.
ವಿಜಯಪುರ ನಗರದ ಇಂಡಿ ರಸ್ತೆಯ ಕೋರಿ ಚೌಕ್ ಬಳಿಯ ಗೋಡೌನ್ ಬೀಗ್ ಮುರಿದು ಲಕ್ಷಾಂತರ ಮೌಲ್ಯದ ನೀರಿನ ಪಂಪ್ಸ್ ಸೆಟ್ಸ್‍ಗಳು ಕದ್ದುಕೊಂಡು ಪರಾರಿಯಾಗಿದ್ದ. ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ಗಾಂಧಿಚೌಕ್ ಪೆÇಲೀಸರು, ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿ ಆತನಿಂದ 6,06,500 ಮೌಲ್ಯದ ಒಂದು ಗೂಡ್ಸ್ ವಾಹನ, 28 ನೀರಿನ ಮೋಟಾರ್ ಪಂಪ್ಸ್ ಸೆಟ್ಸ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗಾಂಧಿಚೌಕ್ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.