ಅಂತರ್ ರಾಜ್ಯ ಕಳ್ಳನ ಬಂಧನ:ಬೆಲೆ ಬಾಳುವ ವಸ್ತುಗಳು ವಶಕ್ಕೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.12:ಹಂಪಿ ವಸತಿ ಗೃಹದಲ್ಲಿ ಬೆಲೆಬಾಳುವ ಕ್ಯಾಮೆರಾ, ಲೆನ್ಸ್ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ಅಂತರ್ ರಾಜ್ಯ ಕಳ್ಳನನ್ನು ಹಂಪಿ ಪ್ರವಾಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ವಾಸಿ ಕಾರ್ತಿಕ್ ಚೌಧರಿ ಅಕ್ಕಿನೇನಿ ಎಂಬ ಆರೋಪಿ ಬಂಧಿತ. 12,63000 ಮೌಲ್ಯದ ಕ್ಯಾಮೆರಾ, ಲೈನ್ಸ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೋಟೊ ಶೂಟ್ ನೆಪದಲ್ಲಿ ಹಂಪಿಗೆ ಬೆಂಗಳೂರು ಮೂಲದ ಪ್ರವೀಣ್ ಕುಮಾರ್ ಅವರನ್ನು ಕಳೆದ ತಿಂಗಳು ಬರ ಮಾಡಿಕೊಂಡ ಆರೋಪಿ ಕಾರ್ತಿಕ್, ಪ್ರವೀಣ್ ಕುಮಾರ್, ವಸತಿ ಗೃಹದಲ್ಲಿ ಮಲಗಿದ ಸಂದರ್ಭದಲ್ಲಿ ಕ್ಯಾಮೆರಾ, ಲೈನ್ಸ್ ಇತರೆ ಪರಿಕರಗಳನ್ನು ದೋಚಿ ಪರಾರಿಯಾಗಿದ್ದನು.

One attachment • Scanned by Gmail