ಅಂತರ್ ಜಿಲ್ಲಾ ದ್ವಿ ಚಕ್ರವಾಹನ ಕಳವು ಆರೋಪಿ ಸೆರೆ

ಬಂಟ್ವಾಳ: ಅಂತರ್ ಜಿಲ್ಲಾ ಕಳವು ಆರೋಪಿಯೋರ್ವನನ್ನು ಸಂಶಯದ ಮೇಲೆ ಬಂಧಿಸಿದ ಗ್ರಾಮಾಂತರ ಪೋಲೀಸರು ಬಂಧಿತನಿಂದ ಕಳವುಗೈದ ದ್ವಿ ಚಕ್ರವಾಹನವೊಂದನ್ನು ವಶಪಡಿಸಿಕೊಂಡ ಘಟನೆ ಸೆ.೧೫ ,ರಂದು ಮಂಗಳವಾರ ನಡೆದಿದೆ.

  ಕೇರಳ ಮಂಗಲ್ಪಾಡಿ ನಿವಾಸಿ ಆಶ್ರಪ್ ಆಲಿ ಬಂಧಿತ ಆರೋಪಿ. ಗ್ರಾಮಾಂತರ ಠಾಣಾ ಪೋಲೀಸರು ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಪೊಳಲಿ ಬಸ್ ನಿಲ್ದಾಣ ದಲ್ಲಿ ವ್ಯಕ್ತಿಯೋರ್ವ ದ್ವಿಚಕ್ರವಾಹನ ನಿಲ್ಲಿಸಿ ನಿಂತುಕೊಂಡಿದ್ದ. ಪೋಲೀಸ್ ಜೀಪ್ ಕಂಡು ಆರೋಪಿ ಓಡಿ ಹೋಗಲು ಪ್ರಯತ್ನಿಸಿದ. ಕೂಡಲೇ ಕಾರ್ಯಪೃವತ್ತರಾದ ಪೋಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಆಶ್ರಪ್  ಅಡ್ಡೂರಿನಿಂದ  ಕಳವು ಮಾಡಿದ ದ್ವಿ ಚಕ್ರವಾಹನದ ಬಗ್ಗೆ ಮಾಹಿತಿ ನೀಡಿದ್ದಾನೆ.

ಆಶ್ರಫ್ ಕಳವು ಆರೋಪಿಯಾಗಿದ್ದು, ಉಳ್ಳಾಲ, ಕೋಣಾಜೆ ಹೀಗೆ ಅನೇಕ ಪೋಲೀಸ್ ಠಾಣೆಯ ಲ್ಲಿ ಕಳವು ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಈತ ಕಳವು ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು ಎರಡು ವಾರಗಳ ಹಿಂದೆ ಜೈಲಿನಿಂದ ಬಿಡುಗಡೆ ಆಗಿದ್ದ. ಬಿಡುಗಡೆಯಾದ ಕೂಡಲೇ ಈತ ಹಳೆಯ ಚಾಲಿಯನ್ನು ಮುಂದುವರಿಸಿಕೊಂಡು ಅಡ್ಡೂರು ಎಂಬಲ್ಲಿನ ದ್ವಿಚಕ್ರ ವಾಹನವನ್ನು ಕಳವು ಮಾಡಿ ಗ್ರಾಮಾಂತರ ಪೋಲೀಸರ ಕೈಗೆ ಸಿಕ್ಕಿ ಬಿದ್ದ.

ಕಾರ್ಯಾಚರಣೆ ಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ ಸಂಜೀವ ಕೆ, ಎ.ಎಸ್.ಐ.ಬಾಲಕೃಷ್ಣ, ಸಿಬ್ಬಂದಿ ಗಳಾದ ಜನಾರ್ಧನ,ಸುರೇಶ್, ಪುನೀತ್, ರಾಧಾಕೃಷ್ಣ, ನಜೀರ್, ಮನೋಜ್ ಭಾಗವಹಿಸಿದ್ದರು.