ಅಂತರ್ ಜಿಲ್ಲಾ ಕಳ್ಳನ ಬಂಧನ

ಹುಬ್ಬಳ್ಳಿ,ಮಾ19: ನಗರದ ಅರ್ಬನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಗದು ಕಳ್ಳತನ ಮಾಡಿ ಸಿಸಿ ಟಿವಿ ಕ್ಯಾಮರಾದ ಡಿವಿಆರ್ ನ್ನು ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಶಹರ ಠಾಣೆಯ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಮಾರ್ಚ್ 11 ರಂದು ರಾತ್ರಿ ವೇಳೆ ನಗರದ ಕೋಯಿನ್ ರಸ್ತೆಯಲ್ಲಿರುವ ಮಹಾಂತಪ್ಪ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಶೆಟರ್ಸ್ ಹಾಕಿದ ಬೀಗಗಳನ್ನು ಮುರಿದು ಸೊಸೈಟಿಯ ಲಾಕರ್ ನಲ್ಲಿದ್ದ 2,31,370 ರೂ. ನಗದು ಹಣ ಮತ್ತು ಸೊಸೈಟಿಯಲ್ಲಿ ಇದ್ದ ಸಿಸಿ ಕ್ಯಾಮರಾ ಡಿವಿಆರ್ ಕಳ್ಳತನ ಮಾಡಿದ್ದನೆನ್ನಲಾಗಿದೆ.
ಹು-ಧಾ ಪೆÇಲೀಸ್ ಆಯುಕ್ತರು, ಉಪ ಪೆÇಲೀಸ್ ಆಯುಕ್ತರು, ದಕ್ಷಿಣ ಉಪವಿಭಾಗ ಹುಬ್ಬಳ್ಳಿ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಶಹರ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಚೌಗಲೆ ಇವರು ಠಾಣೆಯ ಪಿಎಸ್‍ಐ ವಿನೋದ ಹಾಗೂ ಸಿಬ್ಬಂದಿಯಾದ ಸಂಗಪ್ಪ ಕಟ್ಟಿಮನಿ, ರಾವಿರಾಜ ಕೆಂದೂರ, ಕಲ್ಲನಗೌಡ ಗುರುನಗೌಡ್ರ, ರುದ್ರಪ್ಪ ಹೊರಟ್ಟಿ, ರಾಮರಾವ್ ರಾಠೋಡ ಇವರ ಸಹಾಯದೊಂದಿಗೆ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿ ಸೊಸೈಟಿಯಲ್ಲಿ ಕಳ್ಳತನವಾದ 135000 ರೂ ನಗದು ಹಣವನ್ನು ಜಪ್ತು ಮಾಡಿದ್ದಾರೆ.
ಕಳ್ಳತನ ಮಾಡಿದ್ದ ಕಳ್ಳನು ದಾಂಡೇಲಿ ಶಹರ ಪೆÇಲೀಸ್, ಹಳಯಾಳ ಪೆÇಲೀಸ್ ಠಾಣೆ, ಕುಮುಟಾ ಠಾಣೆ, ಮಾಳಮಾರುತಿ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾನೆಂದು ತಿಳಿದು ಬಂದಿದ್ದು, ಆರೋಪಿಯನ್ನು ಪೆÇಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.