ಅಂತರ್ ಕಾಲೇಜ್ ಮಟ್ಟದ ಕ್ರೀಡಾಕೂಟ

ಜಗಳೂರು.ಜ.೭ : ಪಟ್ಟಣದ ಹೋಚಿ ಬೋರಯ್ಯ ಸ್ಮಾರಕ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ  ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ 2022-23 ನೇ ಸಾಲಿನ ಪದವಿ ವಿಭಾಗದ ಅಂತರ್ ಕಾಲೇಜ್ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಹೋಚಿಬೋರಯ್ಯ ಸ್ಮಾರಕ ಪ್ರಥಮ ದರ್ಜೆ ಕಾಲೇಜ್ ದೈಹಿಕ ಶಿಕ್ಷಣ ನಿರ್ದೇಶಕರು ಮಧು ತಿಳಿಸಿದ್ದಾರೆ.ದಾವಣಗೆರೆ ವಿಶ್ವ ವಿದ್ಯಾನಿಲಯ ವ್ಯಾಪ್ತಿಗೆ ಒಳಪಡುವ ಸುಮಾರು 12 ಪ್ರಥಮ ದರ್ಜೆ ಕಾಲೇಜ್ ಗಳನ್ನ ಒಳಗೊಂಡ ಕ್ರೀಡಾ ಕೂಟ ಸಂಯೋಜನೆಯಲ್ಲಿ ಹಲವು ಕ್ರೀಡೆಗಳನ್ನು ಆಯೋಜಿಸಿದ್ದು ದಾವಣಗೆರೆ ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಡಾ.ಕೆ.ವೆಂಕಟೇಶ್  ಮಾರ್ಗದರ್ಶನದಲ್ಲಿ ಹಲವು ಕಾಲೇಜ್ ಗಳು ಆತಿಥ್ಯ ವಹಿಸಿಕೊಂಡಿವೆ ಅದರಂತೆ ಇದೇ ಜನವರಿ ದಿನಾಂಕ 07 ಮತ್ತು 08 ರಂದು    ಜಗಳೂರು ಪಟ್ಟದ ಹೋಚಿಬೋರಯ್ಯ ಸ್ಮಾರಕ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಬೆಳಿಗ್ಗೆ 9:30 ಕ್ಕೆ    ಅಂತರ್ ಕಾಲೇಜ್ ಮಟ್ಟದ ಪುರುಷರ ಬಾಲ್ ಬ್ಯಾಟ್ ಮಿಟನ್  ಹಾಗು ಮಹಿಳೆಯರ ಬಾಲ್ ಬ್ಯಾಟ್ ಮಿಟನ್ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು ಅಂದು ನೆಡೆಯುವ ಕ್ರೀಡಾಕೂಟದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರು , ಹಿರಿಯ ನಿರ್ದೇಶಕರು ಅಂತರ್ ಕಾಲೇಜ್ ಮಟ್ಟದ ಕ್ರೀಡಾಪಟುಗಳು ಹಾಗು ಹೋಚಿಬೋರಯ್ಯ ಸ್ಮಾರಕ ಕಾಲೇಜ್ ನ ಪ್ರಾಂಶುಪಾಲರು ಹಾಗು ಉಪನ್ಯಾಸಕ ವರ್ಗ ಹಾಗು ಸಮಸ್ತ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿವ ಮೂಲಕ ಉತ್ತಮ ಕ್ರೀಡಾಕೂಟವನ್ನ ಕಾಲೇಜ್ ವತಿಯಿಂದ ನೆಡೆಸಿ ಕೊಡಲು ಸಹಕಾರ ನೀಡಿ ಯಶಸ್ವಿ ಮಾಡಬೇಕು ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ