ಅಂತರ್ ಕಾಲೇಜು ಸೆಮಿನಾರ್ ಸ್ಪರ್ಧೆ

ಹುಬ್ಬಳ್ಳಿ,ಮಾ8: ಕೆ ಎಲ್ ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ “ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹಿಳೆ “É ಹಾಗೂ “ಮಹಿಳಾ ನ್ಯಾಯ ಮತ್ತು ಹಕ್ಕುಗಳುÀ” ಎಂಬ ವಿಷಯಗಳ ಮೇಲೆ ಅಂತರ ಕಾಲೇಜು ಸೆಮಿನಾರ್ ಸ್ಪರ್ದೆ ಹಮ್ಮಿಕೊಳ್ಳಲಾಗಿತ್ತು.
ಹುಬ್ಬಳ್ಳಿ ಧಾರವಾಡ ನಗರದ ವಿವಿಧ ಬಿ.ಎಡ್ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಪ್ರೊ ಸುಜಾತಾ ಪಾಟೀಲ ನಿವೃತ್ತ ಪ್ರಾಚಾರ್ಯರು ಜೆ.ಜಿ ವಾಣೀಜ್ಯ ಮಹಾವಿದ್ಯಾಲಯ ಹುಬ್ಬಳ್ಳಿ ಹಾಗೂ ಡಾ ಮಹಾದೇವ ಹರಿಜನ ಸಹ ಪ್ರಾಧ್ಯಾಪಕರು ಎಸ್.ಜೆ.ಎಮ್.ವ್ಹಿ ಮಹಿಳಾ ಮಹಾವಿದ್ಯಾಲಯ ಹುಬ್ಬಳ್ಳಿ ಇವರು ನಿರ್ಣಾಯಕರಾಗಿ ಆಗಮಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಯಾದ ವಿಜಯಕುಮಾರ ಸುನ್ಯಾಳ ಪ್ರಥಮ ಸ್ಥಾನ ಪಡೆದರೆ, ಸೋನಿಯಾ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಯಾದ ಮೃತ್ಯುಂಜಯ ಕಬ್ಬೂರ ದ್ವಿತೀಯ ಸ್ಥಾನ ಹಾಗೂ ಜೆ. ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಯಾದ ಶಿವಾನಿ ಚೌಧರಿ ತೃತೀಯ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಲಿಂಗರಾಜ. ಸಿ. ಮುಳ್ಳಳ್ಳಿ ಆಧುನಿಕ ಮಹಿಳೆಯ ಸಾಧನೆಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಡಾ ಜಯಶ್ರೀ ಕುಂದಗೋಳಮಠ ಹಾಗೂ ಶ್ರೀಮತಿ ಅರ್ಚನಾ ಪೂಜಾರ ಪಾಲ್ಗೊಂಡಿದ್ದರು.