ಅಂತರ್‌ಜಲ ಅಭಿವೃದ್ಧಿಯ ಜತೆಗೆ ಕಾರ್ಮಿಕರ ಜೀವನ ಸಮೃದ್ಧಿ

ದಾವಣಗೆರೆ. ಜೂ.೫; ದುಡಿಯಲು ನಗರ ಪ್ರದೇಶಗಳಿಗೆ ತೆರಳಿದ್ದ ಕೂಲಿ ಕಾರ್ಮಿಕರು ಕೋವಿಡ್ ಲಾಕ್‌ಡೌನ್ ನಿಂದಾಗಿ ತಮ್ಮ ಸ್ವಗ್ರಾಮಗಳಿಗೆ ಮರಳಿದ್ದು, ಇದೀಗ ಗ್ರಾಮದಲ್ಲಿಯೇ ನರೇಗಾ ಯೋಜನೆಯಡಿ ಕೂಲಿ ಕೆಲಸ ಪಡೆಯುವ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಂಡಿದ್ದಾರೆ.ಹೌದು, ಇಂತಹದೊಂದು ಘಟನೆ ದಾವಣಗೆರೆ ತಾಲ್ಲೂಕಿನ ನರಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದಹಟ್ಟಿ ಗ್ರಾಮದಲ್ಲಿ ನಡೆದಿದೆ. ಗುಡ್ಡದಹಟ್ಟಿ ಗ್ರಾಮದಲ್ಲಿ ಸುಮಾರು 300 ಎಕರೆ ಅರಣ್ಯ ಪ್ರದೇಶವಿದ್ದು ಮಳೆಯಾದಾಗ ನೀರು ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಹಾಗೂ ಅಂತರ್ ಜಲಮಟ್ಟದ ಮಣ್ಣಿನ ತೇವಾಂಶ ಇಲ್ಲದೆ ಹೋಗಿತ್ತು.ಈ ಪ್ರದೇಶದಲ್ಲಿ ಒಂದು ಇಂಚು ಮಳೆಯಾದರೂ ಇಳಿಜಾರಿನಿಂದ ಸುಮಾರು 3 ಕೋಟಿ ಲೀಟರ್ ಅಷ್ಟು ಮಳೆ ನೀರು ಈ ಗುಡ್ಡದಲ್ಲಿ ಎಲ್ಲೂ ನಿಲ್ಲದೆ ಮುಂದೆ ಹರಿದು ಹೋಗುತ್ತಿತ್ತು. ಹಾಗೂ ಅಂತರ್ ಜಲಮಟ್ಟದ ಮಣ್ಣಿನ ತೇವಾಂಶ ಇಲ್ಲದೆ ಹೋಗಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆಯು ನರೇಗಾ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದ್ದು, ಕೂಲಿ ಕಾರ್ಮಿಕಾರಿಗೆ ಉದ್ಯೋಗವನ್ನು ಕಲ್ಪಿಸಿದ್ದಲ್ಲದೇ, ಗುಡ್ಡದ ತೇವಾಂಶ ಹೆಚ್ಚಾಗಿ ಸದಾ ಹಸಿರಾಗಿರುತ್ತದೆ ಹಾಗೂ ಸುತ್ತಲಿನ ರೈತರ ಜಮೀನಿನಲ್ಲಿರುವ ಕೊಳವೆ ಬಾವಿಗಳು ಪುನರ್‌ಜೀವನಗೊಳ್ಳುತ್ತದೆ.ದುಡಿಯಲು ನಗರ ಪ್ರದೇಶಗಳಿಗೆ ತೆರಳಿದ್ದ ಕೂಲಿ ಕಾರ್ಮಿಕರು ಕೋವಿಡ್ ಲಾಕ್‌ಡೌನ್ ನಿಂದಾಗಿ ತಮ್ಮ ಸ್ವಗ್ರಾಮಗಳಿಗೆ ಮರಳಿದ್ದ 120 ಕ್ಕೂ ಹೆಚ್ಚು ಕೂಲಿಗಾರರು ತಮ್ಮ ಗ್ರಾಮದಲ್ಲಿಯೇ ನರೇಗಾ ಯೋಜನೆಯಡಿ ಕೂಲಿ ಕೆಲಸ ಪಡೆಯುವ ಮೂಲಕ ತಮ್ಮ ಬದುಕನ್ನು ಹಸನು ಮಾಡಿಕೊಂಡಿದ್ದಾರೆ.ಬೆಂಗಳೂರಿನಲ್ಲಿ 3 ವರ್ಷದಿಂದ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಕೋವಿಡ್-19 ನಿಂದ ಆದ ಲಾಕ್‌ಡೌನ್ ಪರಿಣಾಮದಿಂದಾಗಿ ಕೆಲಸ ಕಳೆದುಕೊಂಡು ಗ್ರಾಮಕ್ಕೆ ಹಿಂದಿರುಗಿದೆ. ಕೆಲಸವಿಲ್ಲದೇ ಜೀವನ ಸಾಗಿಸುವುದು ಕಷ್ಟವಾಗುತ್ತಿರುವ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕಪಕ್ಕದವರು ನರೇಗಾ ಕೆಲಸಕ್ಕೆ ಹೋಗುವುದನ್ನು ನೋಡಿ ಅವರ ಸಲಹೆ ಪಡೆದುಕೊಂಡು ಗ್ರಾಮಪಂಚಾಯಿತಿಯಿಂದ ಜಾಬ್‌ಕಾರ್ಡ್ ಪಡೆದು ಬದು ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೀಗ ಜೀವನ ಸಾಗಿಸಲು ಅನುಕೂಲವಾಗಿದೆ ಎಂದು ನಾಗರಾಜ್ ತಿಳಿಸಿದರು.