ಅಂತರ್‍ರಾಜ್ಯ ಲಾರಿ ಕಳ್ಳನ ಬಂಧನ

ಕುಂದಗೋಳ ಸೆ.11 : ಅಂತರ್‍ರಾಜ್ಯ ಲಾರಿ ಕಳ್ಳನೋರ್ವನನ್ನು ಶನಿವಾರ ರಾತ್ರಿ ಕುಂದಗೋಳ ಪೆÇೀಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.
ಮಹಾರಾಷ್ಟ್ರದ ಕೊಲ್ಹಾಪುರದಿಂದ ಕಳ್ಳತನ ಮಾಡಿದ ಎಂಎಚ್.09-ಬಿಸಿ.6554 ಸಂಖ್ಯೆಯ 15 ಲಕ್ಷ. ರೂ. ಬೆಲೆಬಾಳುವ 12 ಚಕ್ರದ ಲಾರಿಯನ್ನು ಹುಬ್ಬಳ್ಳಿ-ಲಕ್ಷ್ಮೇಶ್ವರ ಮಾರ್ಗವಾಗಿ ಸಾಗಿಸುತ್ತಿರುವಾಗ, ಖಚಿತ ಮಾಹಿತಿ ಮೇರೆಗೆ ಎಸ್ ಪಿ. ಲೋಕೇಶ್ ಜಗಲಾಸರ್, ಉಪಾಧೀಕ್ಷಕರಾದ ಎಂ. ಎಸ್. ಸಂಕದ ಅವರ ಮಾರ್ಗದರ್ಶನದಲ್ಲಿ ಕುಂದಗೋಳ ಪೆÇೀಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿತ ಕಳ್ಳನ ಹೆಸರನ್ನು ಪೆÇೀಲೀಸರು ಬಹಿರಂಗ ಪಡಿಸಿಲ್ಲ.
ಪ್ರಕರಣ ಬೇಧಿಸುವಲ್ಲಿ ಸಿಪಿಐ ಮಾರುತಿ ಗುಳ್ಳಾರಿ, ಸಿಬ್ಬಂದಿಗಳಾದ ಎಎಸ್‍ಐ ಎಂ.ಆರ್.ರಾಮನಾ ಹಾಗೂ ಸಿ. ಎಸ್. ಬಡಿಗೇರ, ಎಂ. ಎಸ್. ಜೋಡಗೇರಿ, ಬಿ. ಎ. ಶಿರಕೋಳ, ಸಾವಿತ್ರಿ ಶಿಂತ್ರಿ, ಎ. ಎಂ. ಬಳಗಾರ, ಪಿ. ಎನ್. ಗೊಂದಿ, ಎಸ್. ಡಿ. ಕಳಾವಂತ, ಎನ್. ಡಿ. ಹೊಸಕೇರಿ ಅವರು ಯಶಸ್ವಿಯಾಗಿದ್ದಾರೆ.