ಆಳಂದ: ಎ.26:ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಆಳಂದ ಮತ್ತು ಅಫಜಲಪೂರ ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಗಡಿಯಲ್ಲ್ಲಿ ಸ್ಥಾಪಿಸಿದ 11 ಅಂತರ್ ರಾಜ್ಯ ಚೆಕ್‍ಪೆÇೀಸ್ಟ್‍ಗಳಿಗೆ ಮಂಗಳವಾರ ಹೆಚ್ಚಿನ ಸಿಬ್ಬಂದಿಗಳ ನಿಯೋಜಿಸುವ ಮೂಲಕ ಚುನಾವಣೆ ಆಯೋಗವು ಮತಷ್ಟು ಕಟ್ಟೇಚ್ಚರ ವಹಿಸಲು ಮುಂದಾಗಿದೆ.
ಚೆಕ್‍ಪೋಸ್ಟ್ ಒಂದರಲ್ಲಿ ನಾಲ್ವರು ಸೇನೆ ಪಡೆ ಹಾಗೂ ಪೊಲೀಸರು ಮತ್ತು ಗ್ರಹ ರಕ್ಷಕದಳ ಸಿಬ್ಬಂದಿ ಸೇರಿ 8 ಜನರು ಅಲ್ಲದೆ, ಕಂದಾಯ ಮತ್ತು ಅಬ್ಕಾರಿ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಪಾರದರ್ಶಕ ತಪಾಸಣೆಗೆ ಒತ್ತು ನೀಡಲಾಗಿದೆ.
ಹಲವಡೆ ಸಿಸಿ ಕ್ಯಾಮಿರಾ ಅಳವಡಿಸುವ ಮೂಲಕ ವಾಹನಗಳ ಸಂಖ್ಯೆ, ಎಷ್ಟು ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ವೇಳೆ ದಾಖಲು ಮಾಡಿರುವ ವಿವರಗಳನ್ನು ಚೆಕ್ ಪೆÇೀಸ್ಟ್‍ಗೆ ನಿಯೋಜಿತರಾಗಿರುವ ಅಧಿಕಾರಿ ಸಿಬ್ಬಂದಿಯಿಂದ ಚೆಕ್ ಪೆÇೀಸ್ಟ್ ನಲ್ಲಿ ನಿರ್ವಹಿಸಲಾಗುತ್ತಿರುವ ರಿಜಿಸ್ಟರ್, ಅಲ್ಲಿ ನಮೂದಾಗಿರುವ ವಿವರಗಳನ್ನು ಮೇಲಾಧಿಕಾರಿಗಳ ಮೇಲಿಂದ ಮೇಲೆ ವರದಿ ಗಮನಿಸಿ ಚೆಕ್ ಪೋಸ್ಟ್ ಸಿಬ್ಬಂದಿಗಳಿಗೆ ಸಲಹೆ ಸೂಚನೆಗಳು ನೀಡತೊಡಗಿದ್ದಾರೆ.
ದಿನದ 24*7 ವೇಳೆಯಲ್ಲಿಯೂ ಕಟ್ಟೆಚ್ಚೆರದಿಂದ ಚೆಕ್ ಪೆÇೀಸ್ಟ್‍ನಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ. ದಾಖಲೆ ಇಲ್ಲದ ಹಣ, ವಸ್ತುಗಳು ಕಂಡು ಬಂದಲ್ಲಿ ಕೂಡಲೇ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಬೇಕು ಎಂದು ಉಸ್ತುವಾರಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಖಜೂರಿ ಚೆಕ್‍ಪೋಸ್ಟ್‍ನಲ್ಲಿ ಇಂಡೋ ಟಿಬೇಟಿಯನ್ ಬಾರ್ಡ್‍ರ ಪೊಲೀಸ್ (ಐಟಿಬಿಪಿ) ತಂಡದ ನಾಲ್ವರು ಹಾಗೂ ಎಸ್‍ಎಸ್‍ಟಿ ಅಧಿಕಾರಿ ಡಾ. ಪರಮೇಶ್ವರ ತಳಕೇರಿ, ಪೊಲೀಸ್ ಸಿಬ್ಬಂದಿ ಜಾವೇದ, ಅಪ್ಸರ್ ಪಟೇಲ್, ಅಬ್ಕಾರಿ ಪ್ರದೀಪ ಮತ್ತು ವಿನಯ ಗ್ರಹರಕ್ಷದಳ ಶ್ರೀಶೈಲ ಚಿಂಚೋಳಿ ಇನ್ನಿತರು ಒಳಗೊಂಡಿದ್ದಾರೆ.
ಹೆಚ್ಚಿದ ತಾಪಮಾನ: 11 ಚೆಕ್‍ಪೆÇೀಸ್ಟ್‍ಗಳಲ್ಲಿ ಹಸಿರು ಪರದೆಯಿಂದ ನೆರಳಿನ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಸಿಗೆಯ ಬಿಸಲು ಹೆಚ್ಚಾಗುತ್ತಿರುವುದರಿಂದ ಎಲ್ಲಾ ಚೆಕ್‍ಪೆÇೀಸ್ಟ್‍ಗಳಲ್ಲಿ ವಾಹನ ತಪಾಸಣೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆಯಾ ಚೆಕ್ ಫೆÇಸ್ಟ್ ಗಳಲ್ಲಿ ನೆರಳಿನ ವ್ಯವಸೆ ಕಲ್ಪಿಸಲಾಗಿದೆ. 11ಚೆಕ್ ಪೆÇೀಸ್ಟ್ ಗಳಲ್ಲಿ, ವಾಹನಗಳ ಪರೀಶೀಲನೆ ಚೆಕ್ ಪೆÇಸ್ಟಗಳಲ್ಲಿ, ಚೆಕ್‍ಪೋಸ್ಟ್ ಮುಂಬಾಗದಲ್ಲಿ ಹಾದು ಒಳಬರುವ ಹಾಗೂ ಹೊರಹೋಗುವ ವಾಹನಗಳಿಗೆ ಬಿರುಸಿನ ತಪಾಸಣೆ ನಡೆಸಲಾಗುತ್ತಿದೆ.
ಮತದಾನವು ಶಾಂತಿಯುತವಾಗಿ, ಪಾರದರ್ಶಕವಾಗಿ ಜರುಗಿಸುವ ಉದ್ದೇಶದಿಂದ ಅಂತರ ರಾಜ್ಯ, ಗಡಿಭಾಗದಲ್ಲಿ ಚೆಕ್ ಪೆÇೀಸ್ಟ್ ಗಳನ್ನು ಸ್ಥಾಪಿÀಸಿ ಅಕ್ರಮದ ಮೇಲೆ ಚುನಾವಣೆ ಆಯೋಗವು ತೀವ್ರ ನಿಗಾ ವಹಿಸಿದೆ.
11 ಪ್ರಕರಣ ದಾಖಲು:
ಆಳಂದ, ಅಫಜಲಪೂರ ಸೇರಿ ಪಟ್ಟು 11 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಅಫಲಪೂರ ಭಾಗದಲ್ಲಿ 6 ಆಳಂದ ವಲಯದಲ್ಲಿ ಖಜೂರಿ, ಮಾದನಹಿಪ್ಪರಗಾ, ಹಿರೋಳಿ, ನಿಂಬಾಳ ಮೈಂದರ್ಗಿ ಮತ್ತು ಗ್ರಾಮೀಣ ಮತಕ್ಷೇತ್ರದ್ ವಿ.ಕೆ. ಸಲಗರ ಹೀಗೆ 11 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಚೆಕ್‍ಪೋಸ್ಟ್‍ನಲ್ಲಿ ಐಟಿಬಿಪಿ ನಾಲ್ವರು ಸಿಬ್ಬಂದಿಗಳು ಹಾಗೂ ಸ್ಥಳೀಯ ಪೊಲೀಸ್‍ರು, ಗ್ರಹರಕ್ಷರು ಒಳಗೊಂಡು 8 ಜನ ಅಲ್ಲದೆ, ಕಂದಾಯ ಹಾಗೂ ಅಬ್ಕರಿ ಅಧಿಕಾರಿಗಳ ಒಳಗೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಈಗಾಗಲೇ ಚುನಾವಣೆ ಸಂಬಂಧಿತ ಎರಡು ಕ್ಷೇತ್ರಗಳ ಚೆಕ್‍ಪೋಸ್ಟ್‍ನಲ್ಲಿ 10 ಪ್ರಕರಣಗಳ ದಾಖಲಾಗಿವೆ. ದಾಖಲೆಯಿಲ್ಲದೆ ಹಣ ಸಾಗಾಟ ಅಕ್ರಮ ಅನುಮತಿಯಿಲ್ಲದೆ ಪ್ರಚಾರ ವಾಹನ ಸಂಚಾರ ಹೀಗೆ ಅಕ್ರಮ ಚಟುವಟುಕೆ ಕುರಿತು ಪ್ರಕಣ ದಾಖಲಾಗಿವೆ.
ಗೋಪಿ ಆರ್. ಡಿವೈಎಸ್‍ಪಿ ಆಳಂದ, ಅಫಜಲಪೂರ