ಅಂತರ್‍ರಾಜ್ಯ ಗಡಿ ಅಪರಾಧ :ಬೀದರನಲ್ಲಿ ಪೊಲೀಸ್ ಅಧಿಕಾರಿಗಳ ಸಭೆ

ಬೀದರ,ಮಾ 13: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗದ ನಿರ್ದೇಶನದಂತೆ ಇಂದು ಅಂತರ್ ರಾಜ್ಯ ಗಡಿ ಅಪರಾಧ ಕುರಿತಂತೆ ನಗರದಲ್ಲಿ ಮಹಾರಾಷ್ಟ್ರ,ತೆಲಂಗಾಣ ಗಡಿಪ್ರದೇಶದ ಮತ್ತು ಬೀದರ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದು ಬೀದರ ಎಸ್ಪಿ ಚನ್ನಬಸವಣ್ಣ ಲಂಗೋಟಿ ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬೀದರ ಜಿಲ್ಲೆಯು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತೆಲಂಗಾಣದ ಸುಮಾರು 425 ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಬೀದರ ಗಡಿಗೆ ಹೊಂದಿದ ಮಹಾರಾಷ್ಟ್ರ,ತೆಲಂಗಾಣ ಗಡಿಪ್ರದೇಶದ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂದರು
ಚುನಾವಣೆ ಸಂದರ್ಭದಲ್ಲಿ ಚೆಕ್ ಪೋಸ್ಟ್‍ಗಳ ಸ್ಥಾಪನೆ,ಮಾದಕ ವಸ್ತುಗಳು,ಮದ್ಯದ ಅಕ್ರಮಸಾಗಣೆ ಬಗ್ಗೆ ನಿಗಾವಹಿಸಲು ಮತ್ತು ಸಹಕಾರ ಕೋರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ಅವರು ತಿಳಿಸಿದರು