ಅಂತರ್ಜಲ ವೃದ್ಧಿಗೆ ಕೆರೆಗಳ ಪುನಶ್ಚೇತನ- ವೀರೇಂದ್ರ 

ಅಮೃತ ಸರೋವರ ಕೆರೆ ನಿರ್ಮಾಣಕ್ಕೆ ಚಾಲನೆ

 ಸಿರವಾರ.ಜು೨೭-  ತಾಲೂಕಿನ ಚಾಗಬಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಾಲಾಪೂರ ಕ್ಯಾಂಪ್ ಕೆರೆಯು ಅಮೃತ್ ಸರೋವರ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವುದರಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಗಬಾವಿ ಗ್ರಾ.ಪಂ ಅಧ್ಯಕ್ಷ ಕೆ.ವೀರೇಂದ್ರ ಅವರು  ಭೂಮಿ ಪೂಜೆ ನೆರವೇರಿಸಿದರು. 

ನಂತರ ಮಾತನಾಡಿದ ಅಧ್ಯಕ್ಷರು ಅಂತರ್ಜಲ ವೃದ್ಧಿಗೆ ಅಮೃತ ಸರೋವರದಡಿ ಕೆರೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಕುಡಿಯುವ ನೀರಿನ ಕೆರೆಯನ್ನು ಪುನೆಶ್ಚೇತನ ಪಡಿಸಿ ಗ್ರಾಮಕ್ಕೆ ಶುದ್ಧವಾದ ನೀರನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದರು. 

ಗ್ರಾಮ ಪಂಚಾಯತಿ ಸದಸ್ಯರಾದ ಕರಿಯಮ್ಮ, ಶಾಂತಮ್ಮ, ಹುಲಿಗೆಮ್ಮ ಹಾಗೂ ಗ್ರಾಮದ ಮುಖಂಡರಾದ ಎಂ.ಶ್ರೀನಿವಾಸ, ಸೂರ್ಯನಾರಾಯಣ ರಾವ, ಎಂ.ರಾಧಾಕೃಷ್ಣ, ಕೆ.ಮಾರ್ಕಂಡಯ್ಯ, ವೈ.ಸತ್ಯನಾರಾಯಣ, ಪಟ್ಟಾಬಿರಾಮ, ವಿ.ರವಿ, ಜಿ.ಸತ್ಯನಾರಾಯಣ, ವೆಂಕಟರಾವ, ಪವನಕುಮಾರ್, ಬಿ.ಹನುಮೇಶ, ಕೆ.ಪವನಕುಮಾರ, ಎಲ್.ವಿ.ಸುರೇಶ ಸೇರಿದಂತೆ ಅನೇಕರು ಇದ್ದರು.