ಅಂತರ್ಜಲ ಮಟ್ಟ ಕುಸಿತು: ಕೈಗೆ ಬಾರದ ಶೇಂಗಾ ಬೆಳೆ


ಲಕ್ಷ್ಮೇಶ್ವರ,ಫೆ.9: ಕಳೆದ ಎರಡು ವರ್ಷಗಳಿಂದ ರೈತರನ್ನು ಒಂದೇ ಸವನೆ ಕಾಡುತ್ತಿರುವ ಅತಿವೃಷ್ಟಿ ಅನಾವೃಷ್ಟಿಯ ಬೆಂಬೂತಗಳ ಮಧ್ಯೆಯೂ ಅ ಧೈರ್ಯಗೊಳ್ಳದ ರೈತ ಸಮುದಾಯ ಬೇಸಿಗೆ ಯಲ್ಲಾದರೂ ನೀರಾವರಿಯ ಮೂಲಕ ಬೆಳೆಗಳನ್ನು ಬೆಳೆದು ಮುಂಗಾರಿನ ವರೆಗೂ ಜಾನುವಾರುಗಳನ್ನು ಸಂರಕ್ಷಿಸಲು ಶೇಂಗಾ ಬೆಳೆಯನ್ನು ಬೆಳೆದಿದ್ದರು.
ಈಗ ರೈತರು ಕೈಕೈ ಸುಟ್ಟುಕೊಳ್ಳುವಂತಾಗಿದೆ ಬೆಳೆದು ನಿಂತ ಶೇಂಗಾ ಬೆಳೆಗೆ ನೀರು ಸಾಲದ್ದರಿಂದ ಬೆಳೆಗಳು ಒಣಗಲಾರಂಬಿಸಿದ್ದು ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೊಳವೆಬಾವಿಗಳಲ್ಲಿನ ನೀರು ಪಾತಾಳ ಸೇರಿರುವುದರಿಂದ ಬೆಳೆಗಳಿಗೆ ನೀರು ಸಾಲದ್ದರಿಂದಾಗಿ ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ.
ರೈತ ಸಂಪರ್ಕ ಕೇಂದ್ರದ ಮಾಹಿತಿಯ ಪ್ರಕಾರ ಬೇಸಿಗೆಯ ಶೇಂಗಾ ಕಾಳು ಬೀಜ ಒಟ್ಟು 550 ಕ್ವಿಂಟಲ್ ಮಾರಾಟವಾಗಿದ್ದು ಪ್ರತಿ ಕ್ವಿಂಟಲ್ಲಿಗೆ 12,300 ಸಾಮಾನ್ಯ ರೈತರಿಗೆ 11350 ಎಸ್ ಸಿ ಎಸ್ ಟಿ ರೈತರಿಗೆ ಮಾರಾಟವಾಗಿದೆ ಸಾವಿರಾರು ಎಕರೆ ಪ್ರದೇಶದಲ್ಲಿನ ಶೇಂಗಾ ಬೆಳೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಪ್ರಸಕ್ತ ವರ್ಷದ ಮುಂಗಾರು ಹಿಂಗಾರು ಸಂಪೂರ್ಣ ಹಾಳಾಗಿದ್ದು ಕೈ ಕೊಟ್ಟ ಮಳೆಯಿಂದ ಬೇಸಿಗೆಯಲ್ಲಾದರೂ ಶೇಂಗಾ ಬೆಳೆಯಬೇಕೆಂಬ ರೈತರ ಮಹದಾಸೆ ಗೆ ಎಳ್ಳುನೀರು ಬಿಡುವಂತಾಗಿದೆ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ತಾಲೂಕಿನ ಉಂಡೆನಳ್ಳಿ ದೊಡ್ದೂರು ದೊಡ್ಡೂರು ತಾಂಡಾ ಉಳ್ಳಟ್ಟಿ ಶಾಬಳಾ ಸೂರಣಗಿ ಹೇಳಿದಂತೆ ಅನೇಕ ಕಡೆ ರೈತರು ಬೆಳೆದ ಬೆಳೆ ನಾಶವಾಗುತ್ತಿದೆ.
ಉಂಡೆನಳ್ಳಿ ಗ್ರಾಮದ ರೈತ ಮಹಿಳೆ ಮಾಳವ್ವಾ ನಂದಗಾವಿ ಪರಮೇಶ್ವರ ಹುಲಕೋಟಿ ಗುಸಿದ್ದಪ್ಪ ಸಂಗೂರ ನಾಗಪ್ಪ ಇಳಿಗೇರ ಈರಯ್ಯ ಹುಬ್ಬಳ್ಳಿ ಮಠ ಗುಡದಯ್ಯ ಮಾಡಳ್ಳಿ ಸೇರಿದಂತೆ ಅನೇಕ ರೈತರು ಒಣಗುತ್ತಿರುವ ಶೇಂಗಾ ಬೆಳೆಯನ್ನು ಫಸಲು ಬರದಿದ್ದರೂ ಕೊನೆಯ ಪಕ್ಷ ಜಾನುವಾರುಗಳಿಗೆ ಮೇವು ಮತ್ತು ಹೊಟ್ಟು ಸಿಗುತ್ತದೆ ಎಂಬ ಕಾರಣದಿಂದಾಗಿ ಶೇಂಗಾ ಹರುಗುತ್ತಿದ್ದಾರೆ.
ಲಕ್ಷ್ಮೇಶ್ವರ ಉಪವಿಭಾಗದ ಹೆಸ್ಕಾಂ ಇಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಲಕ್ಷ್ಮೇಶ್ವರ ತಾಲೂಕ್ ಒಂದರಲ್ಲಿ ಯೇ 4,652 ಕೊಳವೆ ಬಾವಿಗಳಿವೆ ಎಂದು ಆದರೆ ಇದರಲ್ಲಿ ಈಗಾಗಲೇ ಬಹುತೇಕ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ಹೇಳಿದ್ದಾರೆ
ಈ ಕುರಿತು ಜೆಡಿಎಸ್ ನ ಮುಖಂಡರಾದ ಪ್ರವೀಣ್ ಬಾಳಿಕಾಯಿಯವರು ಹೇಳಿಕೆಯನ್ನು ನೀಡಿ ಸರ್ಕಾರ ಇದುವರೆಗೂ ರೈತರ ನೆರವಿಗೆ ಬಂದಿಲ್ಲ ಈಗ ಬೇಸಿಗೆ ಬೆಳೆಯು ನಾಶವಾಗುತ್ತಿದೆ ಸರ್ಕಾರ ಕೂಡಲೇ ರೈತರಿಗೆ ಬೆಳೆ ಹಾನಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.