ಅಂತರ್ಜಲ ಅಭಿವೃದ್ಧಿಗೆ ಶ್ರಮಿಸೋಣ : ಶಾಸಕ ದೇಸಾಯಿ


ಧಾರವಾಡ,ಎ.4: ಇಂದಿನ ದಿನಮಾನಗಳಲ್ಲಿ ಒಂದೇ ಹೊಲದಲ್ಲಿ ಮೂರು-ನಾಲ್ಕು ಕಡೆ ಬೋರವೆಲ್ ಕೊರೆಸುವುದರಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ಧಾರವಾಡ ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಹೇಳಿದರು.
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಸುಮಾರು 1 ಕೋಟಿ ರೂಪಾಯಿ ಅನುದಾನದಲ್ಲಿ ನರೇಂದ್ರ ಗ್ರಾಮದ ಹಿರೇಕೆರೆಯ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಡಿಮೆ ಮಳೆ ಮತ್ತು ಅಂತರ್ಜಲ ಕುಸಿತದಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಗಳಂತಹ ಸಮಸ್ಯೆಗಳು ಉಂಟಾಗುತ್ತಿದ್ದು, ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದರು. ಮುಂಬರುವ ದಿನಗಳಲ್ಲಿ ಈ ಸಮಸ್ಯೆಗಳು ಎದುರಾಗಬಾರದೆಂದು 1 ಕೋಟಿ ಅನುದಾನದಲ್ಲಿ ಕೆರೆಗಳ ಅಭಿವೃದ್ಧಿಪಡಿಸಲಾಗುತ್ತಿದ್ದು, ಗ್ರಾಮಸ್ಥರ ಈ ಜಲಮೂಲದ ಉತ್ತಮ ಸೌಲಭ್ಯ ತೆಗೆದುಕೊಳ್ಳಬೇಕೆಂದು ಶಾಸಕ ಅಮೃತ್ ದೇಸಾಯಿ ತಿಳಿಸಿದರು
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, ಶ್ರೀಮತಿ ಪ್ರೇಮಾ ಕೋಮಾರದೇಸಾಯಿ,ಆತ್ಮಾನಂದ ಹುಂಬೇರಿ, ನಾಗರಾಜ ಹೊಟ್ಟಿಹೊಳಿ,ರಾಯಣಗೌಡ ಪಾಟೀಲ್,ಬಸವರಾಜ್ ಹೊಮ್ಮನ್ನವರ, ಅಪ್ಪಣ್ಣ ಹಡಪದ,ಈಶ್ವರ್ ತೋಟಗೇರ, ಸಂಗಪ್ಪ ಆಯಟ್ಟಿ , ಅರ್ಜುನ ಪಾಟೀಲ್ ,ಲಕ್ಷ್ಮಿ ಸಿಂದೆ ,ನೇತ್ರಾವತಿ ಛಲವಾದಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು,