ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ


ಬಾಗಲಕೋಟೆ, ಮೇ25: ಶ್ರೀ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಸವ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ವತಿಯಿಂದ ದಿನಾಂಕ: 13/05/2024 ರಂದು ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರದಲ್ಲಿ ಹಮ್ಮಿಕೊಳ್ಳಲಾಯಿತು. ಮಕ್ಕಳ ಮತ್ತು ತಾಯಂದಿರ ಆರೋಗ್ಯದ ಮೇಲೆ “ಹವಾಮಾನ ವೈಪರಿತ್ಯದ ಪರಿಣಾಮ ಪರಿಹಾರ ಮತ್ತು ಪ್ರಾಮುಖ್ಯತೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಶುಶ್ರೂಷಕಿಯರ ಪಾತ್ರ ಅಲ್ಲದೆ ತಾಯಿ ಮತ್ತು ಮಗುವಿನ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಧಿಕಾರಿಯಾದ ಡಾ. ಭಾಗ್ಯಶ್ರೀ ಬೆಂಡಿಗೇರಿ ಅವರು ಈಗಿನ ಹವಾಮಾನ ವೈಪರಿತ್ಯದ ಪರಿಹಾರ ಮತ್ತು ಪ್ರಸವ ಸಮಯದಲ್ಲಿ ತಾಯಂದಿರು ಮಗುವಿನ ಕಾಳಜಿ ತೆಗೆದುಕೊಳ್ಳುವ ಮತ್ತು ಆಹಾರದ ಬಗ್ಗೆ ಹಾಗೂ ಪ್ರಸವ ಮತ್ತು ಹೆರಿಗೆ ಸಮಯದಲ್ಲಿ ಶುಶ್ರೂಷಕಿಯರ ಪಾತ್ರ ಅತಿ ಮುಖ್ಯವಾದದ್ದು, ಎಲ್ಲ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತಾಯಿ ಮಗುವನ್ನು ಕಾಪಾಡಿಕೊಳ್ಳುವುದು, ಮುಖ್ಯ ಜವಾಬ್ದರಿಯಾಗಿರುತ್ತದೆ ಎಂದು ಸವಿಸ್ತಾರವಾಗಿ ಶುಶ್ರೂಷಕಿಯರಿಗೆ ಹಾಗೂ ಆಶಾಕಾಂiÀರ್iಕರ್ತೆಯರಿಗೆ ತಿಳಿಸಿದರು. ಹಾಗೂ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿಯಾದ ಅಶೋಕ ಎನ್ ಚಿತ್ತವಾಡಗಿ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಬಿ.ವಿ.ವಿ.ಎಸ್ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಸವ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಪ್ರಾದ್ಯಾಪಕರಾದ ಶ್ರೀಮತಿ ಶರಣಮ್ಮ ಬಂಟನೂರ ಅವರು ಹವಾಮಾನ ವೈಪರಿತ್ಯದ ಪರಿಹಾರ ಕುರಿತು ಹಾಗೂ ಪ್ರಸವ ಸಮಯದಿಂದ ಹೆರಿಗೆಯಾಗಿ 6 ತಿಂಗಳವರೆಗೆ ತಾಯಿ ಮಗುವನ್ನು ರಕ್ಷಸುವುದು ಸಹ ಕುಟುಂಬಸ್ಥರ ಮುಖ್ಯ ಪಾತ್ರ. ಇವೆಲ್ಲ ಸಂಗತಿಗಳನ್ನು ಶುಶ್ರೂಷಕಿಯರು ಹಾಗೂ ಆಶಾಕಾಂiÀರ್iಕರ್ತೆಯರಿಗೆ ಈ ಸಂದೇಶವನ್ನು ಎಲ್ಲರಿಗೂ ತಿಳಿಸುವಂತವರಾಗಬೇಕು ಎಂದು ವಿವರಿಸಿದರು.
ತೃತೀಯ ವರ್ಷದ ಡಿಪ್ಲೋಮಾ ನರ್ಸಿಂಗ್ ವಿದ್ಯಾರ್ಥಿಗಳು ಕಿರು ನಾಟಕದ ಮೂಲಕ ಹವಾಮಾನ ವೈಪರಿತ್ಯದ ಪರಿಹಾರದ ಪ್ರಾಮುಖ್ಯತೆ ಬಗ್ಗೆ ಶುಶ್ರೂಷಕಿಯರ ಮತ್ತು ಆಶಾಕಾರ್ಯಕರ್ತೆಯರ ಪಾತ್ರದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಶುಶ್ರೂಷಕಿಯರು ಹಾಗೂ ಆಶಾಕಾಂiÀರ್iಕರ್ತೆಯರು ಪಾಲ್ಗೊಂಡಿದ್ದರು, ಹಾಗೂ ತೃತೀಯ ವರ್ಷದ ಡಿಪ್ಲೋಮಾ ನರ್ಸಿಂಗ್ ವಿದ್ಯಾರ್ಥಿಯಾದ ಸಚೀನ ಕಾಳಗಿ ಅವರು ಸ್ವಾಗತಿಸಿ, ಸಂಗೀತಾ ಹೆಳವರ ಅವರÀ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.