ಇಂಡಿ:ಜೂ.25: ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹಾಯಕ ಅರಕ್ಷಕ ನೀರಿಕ್ಷಕರು ಇಂಡಿ ಹಾಗೂ ಕುಮಾರಿ ಜಬಿತಾಜ ಜಿಗಳೂರ ಸಂಶೋಧನಾ ವಿದ್ಯಾರ್ಥಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪೂರ ಅವರು ಪಟ್ಟಣದಲ್ಲಿ ಸರಕಾರಿ ಪ್ರಥಮದರ್ಜೆ ಕಾಲೇಜುನಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸುಮಾರು ಒಂದು ಘಂಟೆವರೆಗೆ ಯೋಗದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಯೋಗದ ತರಬೇತಿ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿ ಕಿರಣ ರೇವಣಕರ ಆಯ್,ಕ್ಯೊ,ಎ,ಸಿ, ಸಂಯೋಜಕರಾದ ಡಾ, ಶಿರೀನುಸುಲ್ತಾನಾ ಇನಾಮದಾರ ಅವರು ಮಾತನಾಡಿ ಅಂತರಾಷ್ಟ್ರೀಯ ಯೋಗದಿನಾಚಾರಣೆ ಹಿನ್ನಲೆ ಮತ್ತು ಅದರ ಮಹತ್ವ ಯೋಗದ ಉಪಯೋಗಗಳು ಕುರಿತು ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ಮತ್ತು ಕ್ರೀಡಾವಿಭಾಗದ ಸಂಚಾಲಕರಾದ ಶ್ರೀ ವಿಜಯಮಾಂತೇಶ ದೇವರ ಅವರು ಉತ್ತಮ ಆರೋಗ್ಯ ಕಾಪಾಡುಕೋಳ್ಳಲು ಯೋಗವನ್ನು ಪ್ರತಿನಿತ್ಯ ಹೇಗೆ ಅಳವಡಿಸಿಕೋಳ್ಳಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ಪ್ರಾಂಶುಪಾಲರಾದ ಪ್ರೋ ಆರ್,ಎಚ್ ರಮೇಶ ಅವರು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗದ ಅವಶ್ಯಕತೆ ಕುರಿತು ಮಾಹಿತಿ ನೀಡಿದರು. ಶ್ರೀ ಬಿ,ಎಚ್ ಬಗಲಿ ಅವರು ಕಾರ್ಯಕ್ರಮ ನಿರುಪಣೆ ನಡೆಸಿಕೊಟ್ಟರು. ಶ್ರೀ ಕಾಸಿನಾಥ ಜಾಧವ ಅವರು ಕಾರ್ಯಕ್ರಮ ವಂದನಾರ್ಪಣೆ ನಡೇಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಗ್ರಂಥಪಾಲಕರು ಶ್ರೀ ತಿಪ್ಪಣ್ಣ ವಗ್ದಾಳ, ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಾಜಲಕ್ಷ್ಮೀ ಆರ್, ಕನ್ನಡ ಸಹಾಯಕ ಪ್ರಾಧ್ಯಾಪಲರಾದ ಶ್ರೀಮತಿ ಪುಷ್ಪಲತಾ ಆರ್, ಶ್ರೀ ಸತೀಶಕುಮಾರ ಚುಂಚೊರ, ಪ್ರ,ದ,ಸ, ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.