ಅಂತರಾಷ್ಟ್ರೀಯ ಯೋಗ ದಿನಾಚರಣೆ

ಧಾರವಾಡ,ಜೂ23 : ಜೂನ್ 21 ರಂದು ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿ ಮತ್ತು ಉಚ್ಛನ್ಯಾಯಾಲಯದ ವಕೀಲರ ಸಂಘದ ಸಹಯೋಗದೊಂದಿಗೆ ಆಚರಿಸಲಾಯಿತು.

ಉಚ್ಛನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅವರೊಂದಿಗೆ ಸಹನ್ಯಾಯಮೂರ್ತಿಗಳು ಹಾಗೂ ವಕೀಲರ ಸಂಘದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿ ವಿವಿಧ ಆಸನ ಮತ್ತು ಪ್ರಾಣಾಯಾಮವನ್ನು ಮಾಡಿದರು.

ಉತ್ತಮ ಜೀವನಕ್ಕೆ ಯೋಗ ಅತೀ ಮುಖ್ಯ ಮತ್ತು ಯೋಗ ಮಾಡುವ ಮೂಲಕ ರೋಗದಿಂದ ದೂರ ಇರಬಹುದು ಎಂದು ಹೇಳುವ ಮೂಲಕ ಯೋಗದ ಮಹತ್ವವನ್ನು ಹಿರಿಯ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ ಅವರು ನೆರೆದಿದ್ದ ಯೋಗಪಟುಗಳಿಗೆ ತಿಳಿಸಿದರು.