
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.10: ಜನವಾದಿ ಮಹಿಳಾ ಸಂಘ, ಅಂಗನವಾಡಿ ನೌಕರರ ಸಂಘ, ಅಕ್ಸರ ದಾಸೋಹ ನೌಕರರ ಸಂಘ, ಬಂಡಾಯ ಸಾಹಿತ್ಯ ಸಂಘ, ಡಿ.ವೈ.ಎಫ್.ಐ ಸಂಘಟನೆ ಗಳು ಜಂಟಿ ಯಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದವು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪಾನ್ಯಾಸಕಿ ಡಾ. ಬಿ ಜಿ. ಕಲಾವತಿ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಚಳುವಳಿಗಳು ಬೆಳೆದು ಬಂದಿದ್ದು ಮಹಿಳೆಯರು ಒಗ್ಗಟ್ಟಾಗಿ ಹೋರಾಟಗಳ ಮುಖಾಂತರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಜನವಾದಿ ಮಹಿಳಾ ಸಂಘ ರಾಜ್ಯ ಜಂಟಿ ಕಾರ್ಯದರ್ಶಿ ಜೆ ಚಂದ್ರ ಕುಮಾರಿ ಮಾತನಾಡಿ, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮಹಿಳೆಯರಗೆ ಸೀರೆ ಕುಂಕುಮ ನೀಡುತ್ತಿದ್ದು ತಮ್ಮ ಪಕ್ಷ ಗಳಗೆ ವೋಟ್ ನೀಡಬೇಕು ಎಂದು ಮರುಳು ಮಾಡಿ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತಿದ್ದಾರೆ, ಮತ್ತು ಧರ್ಮ, ಭಾಷೆ, ಜಾತಿ ಹೆಸರುನಲ್ಲಿ ನಮ್ಮಲ್ಲಿ ಒಡಕು ತಂದು ಲಾಭ ಮಾಡಿಕೊಳ್ಳಲು ಪ್ರಯತ್ನಸಿದ್ದು ಅದಕ್ಕೆ ಮಹಿಳೆಯರು ಬಲಿಯಾಗಬಾರದು ಎಂದರು. ಸಭೆಯ ಅಧ್ಯಕ್ಷತೆ ಯನ್ನು ಜೆ.ಎಂ.ಎಸ್ ಜಿಲ್ಲಾ ಅಧ್ಯಕ್ಷರಾದ ತರಂಗಣಿ ವಹಿಸಿದ್ದರು.
ಬಿ ಉಮಾದೇವಿ ಅಧ್ಯಕ್ಷರು ಅಂಗನವಾಡಿ ನೌಕರರ ಸಂಘ , ಎ ಮಲ್ಲಮ್ಮ ಕಾರ್ಯದರ್ಶಿ ಅಂಗನವಾಡಿ ನೌಕರರ ಸಂಘ,ವಿ ದುರ್ಗಮ್ಮ ಕಾರ್ಯ ದರ್ಶಿ ಅಕ್ಷರ ದಾಸೋಹ ನೌಕರರ ಸಂಘ, ರಾಣಿ ಎಲ್ಲಿಜಬಿತ್ ಅಂಗನವಾಡಿ ನೌಕರರ ಸಂಘ ಶುಭಕೋರಿ ಮಾತನಾಡಿದ್ದಿರು.
ಕಾರ್ಯಕ್ರಮ ದಲ್ಲಿ ಬಂಡಾಯ ಸಾಹಿತಿ ಗಳಾದ ಏನ್ ಡಿ ವೆಂಕಮ್ಮಹಿರಿಯ ಕವಿಯತ್ರಿ , ಭಾರತಿ ಮೂಲಮನಿ, ಈರಮ್ಮ ಶಿಕ್ಷಕಿ,ಮಂಗಳಾ ಎಂ ಎಲ್ ಶಿಕ್ಷೆಕಿ, ಅಬ್ದುಲ್ ಹೇ ತೋರಣಗಲ್ಲು, ಪಿ ಆರ್ ವೆಂಕಟೇಶ್ ಅವರು ಕವಿತೆಗಳುನ್ನು ಸಭೆಯಲ್ಲಿ ವಾಚನೆ ಮಾಡಿದರು.
ಕಾರ್ಯಕ್ರಮವನ್ನು ಈರಮ್ಮ ವಣೇನೂರ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಮುಖಂಡರು ಕ್ರಾಂತಿ ಗೀತೆಗಳನ್ನು ಹಾಡಿದರು. ಕಾರ್ಯಕ್ರಮಕ್ಕೆ ಸ್ವಾಗತವನ್ನು ಮಹಾಂತಮ್ಮ ಕೋರಿದರು. ಈರಮ್ಮ ತಂಬರಲ್ಲಿ ಅವರು ವಂದಿಸಿದರು. ಡಿವೈಎಫ್ಐ ಸದಸ್ಯರಾದ ಎರ್ರಿ ಸ್ವಾಮಿ, ಶಂಕರ ಗೌಡ ಮುಂತಾದವರು ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಮತ್ತು ಲೈಮಾನ ಸ್ಪೂನ್ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಕೊನೆಯಲ್ಲಿ ಬಹುಮಾನ ವಿತರಣೆ ಮಾಡಲಾಯಿತು.