ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ


ಗದಗ, ಮಾ 10: ಆರೋಗ್ಯವಂತ ಮಹಿಳೆಯರಿಂದ ಆರೋಗ್ಯಕರ ಭಾರತ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಮಂಜುಳಾ ಸಜ್ಜನ ಅವರು ತಿಳಿಸಿದರು.
ತಾಲ್ಲೂಕಿನ ಮುರಡಿ ತಾಂಡಾ ಗ್ರಾಮದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮುಂಡರಗಿ ತಾಲೂಕ ಆಡಳಿತ ತಾಲೂಕ ಪಂಚಾಯತ ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳು ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲೂಕಾ ಮಟ್ಟದ ಎನ್,ಜಿ,ಓ ಪ್ರತಿನಿಧಿಗಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ಕುರಿತು ಮಾತನಾಡಿದರು.
ಮಹಿಳೆಯರು ವರ್ಷಕ್ಕೊಮ್ಮೆ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೋಳಬೇಕು. ಗಂಭೀರ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯುದಕ್ಕಾಗಿ ಪ್ರತಿಯೊಬ್ಬರು 5 ಲಕ್ಷದವರೆಗಿನ ಆರೋಗ್ಯ ವಿಮೆಯ ಆಭಾ ಕಾರ್ಡನ್ನು ಹೊಂದಲು ತಿಳಿಸಿದರು. ಗ್ರಾಮ ಓನ್ ಕೇಂದ್ರದಲ್ಲಿ ತಮ್ಮ ಆಧಾರ ಸಂಖ್ಯೆ ನೀಡಿ ಆಭಾ ಕಾರ್ಡನ್ನು ಮಾಡಿಸಿಕೊಳ್ಳಬೇಕು, ತಂಬಾಕು ಸೇವನೆಯಿಂದ ಕ್ಯಾನರ್ ಹಾಗೂ ನಿಮೋನಿಯಾ ಟಿಬಿ, ಅಸ್ತಮಾ, ಹೃದಯರೋಗ, ಬ್ರೋಂಕೈಟಿಸ್, ರೋಗಗಳು ಬರುತ್ತವೆ. ಅದಕ್ಕಾಗಿ ಇಂತಹ ದುಷ್ಚಟಗಳಿಗೆ ಬಲಿಯಾಗದೇ ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂದು ಎಂದು ಹೇಳಿದರು.
ಪಿ.ಎಚ್.ಸಿ.ಓ ಸುರೇಖಾ ಎಚ್.ಕೆ. ಅವರು ಮಾತನಾಡಿ ಆರೋಗ್ಯ ಇಲಾಖೆಯಿಂದ ಸಿಗುವ ಆರೋಗ್ಯ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಅದರ ಉಪಯೋಗವನ್ನು ಪಡೆದುಕೊಂಡು ಸಾರ್ವಜನಿಕರು ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯತ ಅಧ್ಯಕ್ಷೆ ಕವಿತಾ ಶಿ ಬಾರಕೇರ ಅವರು ಮಾತನಾಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಯುವ ಜನತೆಯಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದÀು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು, ಎನ್.ಜಿ.ಓ. ಪ್ರತಿನಿಧಿಗಳು ಉಪಸ್ಥಿತರಿದ್ದರು. ಆರ್.ಎಚ್.ಗೌಡ್ರ ಕಾರ್ಯಕ್ರಮವನ್ನು ಸ್ವಾಗತಿಸಿದರು, ಅಂಗನವಾಡಿ ಕಾರ್ಯಕರ್ತೆಯರು ಪ್ರಾರ್ಥಸಿದರು, ರತ್ನವ್ವ ಅಕ್ಕಿ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.