ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮ

ವಿಜಯಪುರ,ಮಾ.13:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ವಿಜಯಪುರ ಕದಳಿ ಮಹಿಳಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಮಾರ್ಚ್ 11 ರಂದು ನಗರದ ಬಂಜಾರಾ ಕ್ರಾಸ್ ಬಳಿ ಇರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಭಾಭವನದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಹಿರಿಯರಾದ ಮಾತೋಶ್ರೀ. ಅಕ್ಕಮಹಾದೇವಿ ಬುರ್ಲಿ, ಡಾ. ಬನುದೇವಿ ಸಂಕಣ್ಣವರ, ವಿ.ಸಿ. ನಾಗಠಾಣ, ವಿದ್ಯಾವತಿ ಅಂಕಲಗಿ, ಡಾ. ಉಷಾದೇವಿ ಹಿರೇಮಠ, ದಾಕ್ಷಾಯಿಣಿ ಬಿರಾದಾರ, ಶಾರದಾ ಐಹೊಳೆ, ಭಾರತಿ ಭುಯ್ಯಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಿರಿಧಾನ್ಯಗಳ ಸ್ಪರ್ಧೆಯಲ್ಲಿ ಗಿರಿಜಾ ಕೋವಳ್ಳಿ, ಸವಿತಾ ಕೋರಿ, ಪಲ್ಲವಿ ಹರಲಗಿ, ರೇಖಾ ಗೊತ್ತರಗಿ, ರೇಖಾ ಪಂಡಿತ, ರೂಪ ನಾಗಾವಿ, ಸುನಂದಾ ಜಿಂಜರವಾಡ, ಸಾರಿಕಾ ಪಾಟೀಲ, ಶಿವಲೀಲಾ ಡೊಳ್ಳಿ, ವಿಜಯಲಕ್ಷ್ಮಿ ಕಬಾಡೆ, ಸಾವಿತ್ರಿ ತಾವರಖೇಡ, ಟಿ.ಆರ್. ಜಮಖಂಡಿ, ತ್ರಿವೇಣಿ ಬುರ್ಲಿ, ಶಕುಂತಲಾ ಡುಮನಾಳ ಇನ್ನು ಅನೇಕ ಮಹಿಳೆಯರು ಭಾಗವಹಿಸಿದ್ದರು.
ಮಹಿಳಾ ಸಂಘಟನೆಗಳಿಂದ ಸಭಾಭವನದಲ್ಲಿ ವಡುಪುಗಳಿಂದ ತನ್ನ ಪತಿಯ ಹೆಸರು ಹೇಳುವ ಕಾರ್ಯಕ್ರಮ ನಡೆಯಿತು. ಸಿರಿಧಾನ್ಯಗಳಿಂದ ರುಚಿ ರುಚಿಯಾದ ಅಡಿಗೆಯನ್ನು ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿ ಮಹಿಳೆಯರು ಮೇಳದಲ್ಲಿ ಆಗಮಿಸಿದ ಎಲ್ಲರಿಗೂ ಸಿಹಿಯಾದ ಸಿರಿಧಾನ್ಯ ಅಡಿಗೆಯನ್ನು ಉಣಬಡಿಸಿ ಆನಂದಪಟ್ಟರು.
ಸಂಘದ ಪದಾಧಿಕಾರಿಗಳು ಹಾಗೂ ಸಾಹಿತಿಗಳು ಕಾರ್ಯಕ್ರಮದಲ್ಲಿ ಇದ್ದರು.