ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.11: ವಿಮಾ ನೌಕರರ ಸಂಘ, ಎಲ್.ಐ.ಸಿ. ಶಾಖ ಘಟಕ 2 ಬಳ್ಳಾರಿಯಲ್ಲಿ (ಮೂಲ ಸಂಘಟನೆ AIIEA) ಯ ನಿಜವಾದ ಸಂಪ್ರದಾಯಕ್ಕೆ ತಕ್ಕಂತೆ ಸಾಮಾಜಿಕ ಬದ್ಧತೆಯನ್ನು ಪೂರೈಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿದ್ದೇವೆ. ಕಮೇಲ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಯಂ ಪ್ರೇರಿತರಾಗಿ,  ಮತ್ತು ವಿದ್ಯಾರ್ಥಿಗಳ ಉತ್ತಮ ಪ್ರಯೋಜನಕ್ಕಾಗಿ 43 ಇಂಚಿನ ಆಂಡ್ರಾಯ್ಡ್ ಫ್ಲಾಟ್ ಟಿವಿಯನ್ನು ಕೊಡುಗೆಯಾಗಿ ನೀಡಿದ್ದೇವೆ. ಈ ಸಂದರ್ಭದಲ್ಲಿ 71 ವಯಸ್ಸಿನ ನಿವೃತ್ತ ಶಿಕ್ಷಕಿಯಾದ ಶ್ರೀಮತಿ. ಸುಜಾತ ರವರನ್ನು ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಮತ್ತು ಈಗಲೂ ಪ್ರತಿನಿತ್ಯವೂ ಶಾಲೆಗೆ ಬಂದು ಅವಿರತವಾಗಿ ಸೇವೆಸಲ್ಲಿಸುತ್ತಿರುವುದನ್ನು ಗುರುತಿಸಿ ಸಂಘಟನೆ ಪರವಾಗಿ ಎಲ್ಲ ಮಹಿಳೆಯರಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ .ಸಂಪತ್ ಕುಮಾರ್, ವೆಂಕಟ ರಾಮುಡು, ಸಂಘಟನೆಯ ಕಾರ್ಯದರ್ಶಿ ಡಿ . ವಿ.ಸೂರ್ಯ ನಾರಾಯಣ, ಖಜಾಂಚಿ ವಿಗ್ನೇಶ್, ಶಾಂತಕುಮಾರಿ, ವಿ.ರವಿಕುಮಾರ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು ಶ್ರಿ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.