ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಪ್ತಾಹ ಕಾರ್ಯಕ್ರಮ

ಗದಗ,ಮಾ7 : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಪ್ತಾಹ ಕಾರ್ಯಕ್ರಮವನ್ನು ಗದಗನ ಮಹೇಶ್ವರಿ ವಿವಿದೋದ್ದೇಶಗಳ ಮಹಿಳಾ ಮಂಡಳಿ (ರಿ) ಸಂಸ್ಥೆಯಲ್ಲಿ ಹೊಲಿಗೆ ಮತ್ತು ಬ್ಯೂಟಿಷಿಯನ್ ಕೋರ್ಸ್‍ನ ತರಬೇತಿದಾರರಿಗೆ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಇರುವ ಕಾನೂನುಗಳಾದ ಪೆÇಕ್ಸೋ ಕಾಯ್ದೆ 2012, ಮಹಿಳೆಯರ ಆಸ್ತಿ ಹಕ್ಕು, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ಬಗ್ಗೆ ಮಾಹಿತಿ ನೀಡಿ ಕಾನೂನುಗಳ ಬಗ್ಗೆ ಸವಿವರವಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ ವಾಯ್. ಶೆಟ್ಟೆಪ್ಪನವರ ಮಾತನಾಡಿ ಮಹಿಳೆಯರು ಮಹಿಳಾ ಸಬಲೀಕರಣ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡೆಯಬೇಕೆಂದು ಕರೆ ನೀಡಿದರು.
ಸಖಿ ಒನ್ ಸ್ಟಾಪ್ ಸೆಂಟರ್ ಆಪ್ತ ಸಮಾಲೋಚಕರಾದ ನಾಗರತ್ನ ನಾಲ್ಕುರುವಿ ಇವರು ನೊಂದ ಮಹಿಳೆಯರಿಗೆ ಪುನರ್ವಸತಿ ಕಾರ್ಯಕ್ರಮಗಳು ಹಾಗೂ ಲಿಂಗಸಮಾನತೆಯ ಕುರಿತು ಮಾತನಾಡಿದರು. ಸಖಿ ಒನ್ ಸ್ಟಾಪ್‍ಸೆಂಟರ್ನ ಕಾನೂನು ಸಲಹೆಗಾರರಾದ ಕಾಜಿಮುನ್ನಿ ನಾಯ್ಕರ್ ಇವರು ಸಖಿ ಸೆಂಟರ್ನ ಉದ್ದೇಶಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಸಾವಿತ್ರಿ ಪೂಜಾರ ಇವರು ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು.
ಮಹೇಶ್ವರಿ ವಿವಿದೋದ್ದೇಶಗಳ ಮಹಿಳಾ ಮಂಡಳಿಯ ಅಧ್ಯಕ್ಷ ಜಯಶ್ರೀ ಹಿರೇಮಠ ಇವರು ಮಹಿಳೆಯರು ಆರ್ಥಿಕವಾಗಿ ಪ್ರಬಲರಾಗಬೇಕು ವೃತ್ತಿಪರ ಕೌಶಲ್ಯಗಳನ್ನು ಕಲಿತು ಸ್ವ ಉದ್ಯೋಗವನ್ನು ಮಾಡಬೇಕೆಂದು ಮಾಹಿತಿ ನೀಡಿದರು.
ಮಹೇಶ್ವರಿ ವಿವಿದೋದ್ದೇಶ ಮಹಿಳಾ ಮಂಡಳಿಯರ ತರಬೇತುದಾರರು ವಂದಿಸಿದರು.