ಅಂತರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ರೈತ ಸಂಘ ಬೆಂಬಲ

ನಂಜನಗೂಡು: ಜೂ.06:- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದಲ್ಲಿ ಅಂತರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿದರು
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬಿಜೆಪಿ ಪಕ್ಷದ ಸಂಸದ ಬ್ರಿಜ್ ಬೂಶನ್ ನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಂತಹ ಅಂತರಾಷ್ಟ್ರೀಯ ಖ್ಯಾತಿ ಪಡೆದ ಮಹಿಳಾ ಕುಸ್ತಿಪಟುಗಳನ್ನು ದೂರು ದಾಖಲಿಸಲು ನಿರಾಕರಿಸಿದ ವಿಚಾರವಾಗಿ ಶುರುವಾದ ಹೋರಾಟ ಇಂದು ಇಡೀ ವಿಶ್ವದ ಗಮನ ಸೆಳೆದಿದ್ದು ಇದುವರೆಗೂ ಈ ದೇಶದ ಪ್ರಧಾನಿಯವರು ಈ ವಿಷಯಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಇರುವುದನ್ನು ಕಡೆಗಣಿಸಿ ಹಾಗೂ ಸಮಸ್ಯೆಗೆ ಒಳಗಾಗದ ದೇಶದ ಯಾವುದೇ ನಾಗರಿಕರಿಗೆ ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ಇರುವಂತಹ ಹಕ್ಕುಗಳ ಉಲ್ಲಂಘನೆ ಮಾಡಿರುವ ವಿಚಾರವಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಬೆಂಬಲ ಸೂಚಿಸುತ್ತೇವೆ
ದೇಶಕ್ಕೆ ಕೀರ್ತಿ ತಂದಂತಹ ಕ್ರೀಡಾಪಟುಗಳ ಬೆಂಬಲಕ್ಕೆ ನಿಲ್ಲದ ಕೇಂದ್ರ ಸರ್ಕಾರ ವಿರುದ್ಧ ದಿಕ್ಕಾರ ಕೋಗಿದರು
ದೇಶದಲ್ಲಿ ಯಾವುದೇ ವ್ಯಕ್ತಿ ಪೆÇಲೀಸ್ ಠಾಣೆಗೆ ದೂರು ನೀಡಲು ಹೋದಾಗ ಮೊದಲು ದೂರನ್ನು ದಾಖಲಿಸಿಕೊಳ್ಳಬೇಕು ನಂತರ ವಿಚಾರಣೆ ಎಂಬ ಕಾನೂನು ಇದ್ದರೂ ಅದನ್ನು ಉಲ್ಲಂಘನೆ ಮಾಡಿ ಕ್ರೀಡಾಪಟುಗಳ ವಿರುದ್ಧ ನಡೆಯುತ್ತಿದ್ದಾರೆ ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಇಲ್ಲವೇ ಇಲ್ಲ ಸಂಶೋಧನಾ ಬೆಂಬಲ ಕೈ ಬಿಟ್ಟು ಕ್ರೀಡಾಪಟುಗಳಿಗೆ ಬೆಂಬಲಿಸಿ ನ್ಯಾಯ ಕೊಡಬೇಕೆಂದು ಒತ್ತಾಯಿಸಿದರು
ನಂಜನಗೂಡು ತಾಲೂಕು ತಹಶೀಲ್ದಾರ್ ಶಿವಮೂರ್ತಿ ರವರಿಗೆ ಮನವಿ ಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ರಘು ನಿಮ್ಮವು ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ನಂಜನಗೂಡು ತಾಲೂಕು ಅಧ್ಯಕ್ಷ ಮಂಜು ಕಿರಣ್ ಚುಂಚನಹಳ್ಳಿ ಮಲ್ಲೇಶ್ ನಗರ ವಿಜಯಕುಮಾರ್ ಸರಿದಂತೆ ಇತರರು ಇದ್ದರು