“ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ಆಚರಣೆ

ತಾಳಿಕೋಟೆ:ಸೆ.16: ಪಟ್ಟಣದ ಎಸ್.ಕೆ.ಕಲಾ ಹಾಗೂ ವಾಣಿಜ್ಯ ಮಹಾ ವಿಧ್ಯಾಲಯದಲ್ಲಿ ಶುಕ್ರವಾರರಂದು “ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ಆಚರಿಸುವದರ ಮೂಲಕ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.
ಮಹಾ ವಿಧ್ಯಾಲಯದ ಪ್ರಾಚಾರ್ಯ ಎಸ್.ಆಯ್.ಜಾಲವಾದಿ ಅವರು ಪ್ರಜಾಪ್ರಭುತ್ವ ಮತ್ತು ಸಂವಿದಾನದ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಿದರು.
ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಲಲಿತಾ ಗೌಡರ ಅವರು ಸಂವಿದಾನದ ಪೀಠಿಕೆಯನ್ನು ಭೋದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಭೋದಕ/ಭೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.