ಅಂತರಾಷ್ಟ್ರೀಯ ಪೇಪರ್ ಬ್ಯಾಗ್ ದಿನ ಆಚರಣೆ

ರಾಯಚೂರು, ಜು. ೧೨- ಅಂತರಾಷ್ಟ್ರೀಯ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಯಿತು. ಶಾಲೆಯ ಸಂಸ್ಥಾಪಕರಾದ ಲಲಿತಾ ಎಂ. ಮಾತಾನಾಡುತ್ತಾ ಪ್ಲಾಸ್ಟಿಕ್ ಮಾನವನ ಜೀವನವನ್ನು ಸರ್ವವ್ಯಾಪಿಯಾಗಿ ಆವರಿಸಿದೆ.
ಪ್ಲಾಸ್ಟಿಕ್ ಬಳಸುವ ಏಕೈಕ ಜೀವಿ ಮಾನವನೇ ಆಗಿದ್ದರೂ ಅದರಿಂದಾಗುವ ಭಯಾನಕ ದುಷ್ಪರಿಣಾಮವನ್ನು ಇಡೀ ವಿಶ್ವವೇ ಅನುಭವಿಸಬೇಕಿದೆ. ಪ್ರತಿದಿನವೂ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್ ಪ್ರಮಾಣವನ್ನು ನೋಡಿದರೆ ಭಯ ಹುಟ್ಟಿಸುವಂತಿದೆ ಇದೇ ರೀತಿ ಮುಂದುವರೆದರೆ ಭೂಖಂಡಗಳ ಜೊತೆಗೆ ಜಲಗೋಳವು ಪ್ಲಾಸ್ಟಿಕ್ ಮಯವಾಗಿದೆ.
ವಾಯುಗೋಳವು ಪ್ಲಾಸ್ಟಿಕ್ ಮಯವಾಗುವದರಲ್ಲಿ ಆಶ್ಚರ್ಯವಿಲ್ಲ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಏಕ ಬಳಕೆಯ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಿದೆ. (ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್) ಬಳಕೆಯನ್ನು ನಿಷೇಧಿಸಲಾಗಿದೆ. ಇವುಗಳೆಂದರೆ ಕ್ಯಾರಿಬ್ಯಾಗ್‌ಗಳು, ಪ್ಲಾಸ್ಟಿಕ್ ಬಟ್ಟಲುಗಳು, ಪೊಟ್ಟಣಕ್ಕೆ ಬಳಸಲಾಗುವ ಕವರ್‌ಗಳು, ಬಳಸಿ ಎಸೆಯುವ ಪ್ಲಾಸ್ಟಿಕ್ ಕಪ್‌ಗಳು, ಧ್ವಜಗಳು ಹೀಗೆ ಮುಂತಾದವುಗಳು ನಿಷೇಧಿಸಲು ಕ್ರಮಕೈಗೊಂಡಿದೆ. ಈ ತರಹದ ತ್ಯಾಜ್ಯವಾಗುವ ಪ್ಲಾಸ್ಟಿಕ್ ಪುನರ್ಬಳಕೆ ಸಾಧ್ಯವಿಲ್ಲ. ಹೀಗಾಗಿ ಬಳಕೆಯಾಗದ ಪ್ಲಾಸ್ಟಿಕ್ ಎಲ್ಲವೂ ಪರಿಸರಕ್ಕೆ ತ್ಯಾಜ್ಯವಾಗಿ ಸೇರುತ್ತದೆ ಎಂದರು. ಹಾಗೇ ಮುಂದುವರೆದು ಮಾತಾನಾಡುತ್ತಾ. ನಾವು ಸೇವಿಸುವ ಆಹಾರದಲ್ಲಿ ಅದೆಷ್ಟೋ ಪ್ಲಾಸ್ಟಿಕ್ ಕಣಗಳು ನಮಗೆ ಅರಿವಿಲ್ಲದಂತೆ ದೇಹ ಸೇರುತ್ತದೆ. ಪ್ರಸ್ತುತ ನಮ್ಮ ದಿನನಿತ್ಯದ ಚಟುವಟಿಕೆಗಳು ಹಲ್ಲುಜ್ಜುವ ಬ್ರಷ್‌ನಿಂದ ಹಿಡಿದು ಆರಂಭಗೊಂಡು ಹೆಜ್ಜೆ ಹೆಜ್ಜೆಗೂ ಪ್ಲಾಸ್ಟಿಕ್ ಬಳಕೆ ಮಿತಿಮಿರುತ್ತದೆ. ಅದಕ್ಕಾಗಿ ಇಂದು ಪೇಪರ್ ಬ್ಯಾಗ್ ಬಳಸುವಂತೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಅಂತರಾಷ್ಟ್ರೀಯ ಪೇಪರ್ ಬ್ಯಾಗ್ ದಿನವನ್ನು ಆಚರಿಸುವ ಪರಿಸ್ಥಿತಿ ಬಂದೊದಗಿದೆ ಎಂದರು.
ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಸೃಷ್ಟಿಯ ಮೇಲೆ ಜೀವತಳೆದ ಪ್ರತಿಯೊಂದು ಜೀವಿಯ ಜೀವನವು ಶ್ರೇಷ್ಠವಾದದ್ದು ಅವುಗಳನ್ನು ರಕ್ಷಿಸಲು ನಾವು ಪ್ಲಾಸ್ಟಿಕ್ ಬಳಸದೇ ಆದಷ್ಟು ನಾವೆಲ್ಲರು ಪೇಪರ್ ಬ್ಯಾಗ್, ಬಟ್ಟೆ ಕೈ ಚೀಲಗಳನ್ನು ಹಾಗೂ ಸೇಣಬಿನ ಚೀಲಗಳನ್ನು ಬಳಸಬೇಕು ಅದರ ಜೊತೆಗೆ ಮಕ್ಕಳಾದ ನೀವು ಸ್ಟೀಲ್ ಬಾಟಲ್ ಹಾಗೂ ಸ್ಟೀಲ್ ಊಟದ ಡಬ್ಬಿಗಳನ್ನು ಬಳಸಬೇಕು. ಎಂದರು. ಮೊದಲು ನಾವು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನಮ್ಮ ನೆರೆಹೊರೆಯವರಿಗೂ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಮಕ್ಕಳು ಪೇಪರ್ ಬ್ಯಾಗ್ ತಯಾರಿಸಿ ಜಾಗೃತಿ ಮೂಡಿಸಲು ಈ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು. ಇದಕ್ಕೆ ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.