ಅಂತರಾಷ್ಟ್ರೀಯ ಕಾಫಿ ದಿನ

ಯಾಕೋ ವಿಪರೀತ ತಲೆ ನೋವಮ್ಮಾ… ಸ್ವಲ್ಪ ಕಾಫಿ ಮಾಡ್ಕೊಡ್ತೀಯಾ…’ ಅಂತ ಸುಳ್ಳು ಸುಳ್ಳೇ ತಲೆ ನೋವು ಭರಿಸಿಕೊಂಡು ಕಾಫಿ ಕುಡಿಯುತ್ತಿದ್ದ ಕಾಲವೊಂದಿತ್ತು.

ಒಂದೆಡೆ ವಿಪರೀತ ತಲೆನೋವು, ಮತ್ತೊಂದೆಡೆ ಆಫೀಸಿನಲ್ಲಿ ಬಿಟ್ಟು ಬಿಡದ ಕೆಲಸ, ಹೀಗಿರುವಾಗ ಮೈಂಡ್ ಫ್ರೆಶ್ ಮಾಡಲು ಒಂದು ಕಪ್ ಕಾಫಿ ಕುಡಿದರೆ ಸಾಕು. ಎಲ್ಲಾ ತೊಂದರೆಗಳು ದೂರ ಓಡಿದಂತಾಗುತ್ತದೆ. ಹಾಗಾಗಿ ಹೆಚ್ಚಿನವರು ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೇ ಹೋಗುವ ಪ್ರಸಂಗಗಳು ಇದೆ.  ಹೌದು. ಅನೇಕರಿಗೆ ಕಾಫಿ ಕುಡಿಯದಿದ್ದರೆ ಅಂದಿನ ದಿನ ಅಷ್ಟೇನು ಸರಿಯಾದಂತೆ ಅನಿಸುವುದಿಲ್ಲ. ಹಾಗಾಗಿ ಸರಿಯಾದ ಜಾಗ, ಇಷ್ಟವಾದ ಕಾಫಿ ಕುಡಿಯಲು ಎಷ್ಟೇ ದೂರವಾದರು ಕ್ರಮಿಸಿ ಕಾಫಿ ಸೇವಿಸುತ್ತಾರೆ.  ಅಂತಹ ಕಾಫಿ ಪ್ರಿಯರಿಗೆ ಇಂದು ಆಚರಿಸಲಾಗುತ್ತಿರುವ ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಶುಭಾಶಯಗಳು.

ಅನೇಕರಿಗೆ ಬೆಳಗ್ಗೆ ಎದ್ದ ಕೂಡ ಕಾಫಿ ಕುಡಿಯಲೇ ಬೇಕು. ಇನ್ನು ಕೆಲವರು ಬೆಡ್ ಕಾಫಿ ಕೊಡದಿದ್ದರೆ ರಂಪಾ ಮಾಡುತ್ತಾರೆ. ಆದರೆ ಬೆಳಗ್ಗಿನ ಜಾವ ಎದ್ದ ಕೂಡಲೆ ಕಾಫಿ ಕುಡಿಯುವುದು ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ. ಏಕೆಂದರೆ, ಖಾಲಿ ಹೊಟ್ಟೆಯಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಾಗಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ನಿರ್ವಹಿಸುವಲ್ಲಿ ಕಾರ್ಟಿಸೋಲ್ ಕಾರಣವಾಗುತ್ತದೆ. ಮತ್ತೊಂದು ವಿಚಾರವೆಂದರೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದು ಉತ್ತಮವಲ್ಲ. ಮಲಬದ್ಧತೆ, ಹುಣ್ಣು, ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಅಷ್ಟೇ ಅಲ್ಲ, ಖಾಲಿ ಹೊಟ್ಟೆಯಲ್ಲಿ ಕಾಫಿ ಸೇವಿಸುವುದರಿಂದ ಆಮ್ಲದ ಪ್ರಮಾಣ ಹೆಚ್ಚಾದಾಗ, ಎದೆಯಲ್ಲಿ ಉರಿ ಉಂಟು ಮಾಡಬಹುದು. ಆದರೂ ಅನೇಕರು ಕಾಫಿ ಹೀರಿಯೇ ಮುಂದಿನ ಕೆಲಸ ಶುರುಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ಕಾಫಿ ದಿನವು ಕಾಫಿಯನ್ನು ಒಂದು ಪಾನೀಯವಾಗಿ ಪ್ರಚಾರ ಮಾಡಲು ಮತ್ತು ಆಚರಿಸಲು ಬಳಸಲಾಗುವ ಒಂದು ಸಂದರ್ಭವಾಗಿದೆ, ಜಗತ್ತಿನಾದ್ಯಂತ ಹಲವು ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015, ಮಿಲನ್ನಲ್ಲಿ ಪ್ರಾರಂಭವಾಯಿತು. ನ್ಯಾಯೋಚಿತ ವ್ಯಾಪಾರ ಕಾಫಿಯನ್ನು ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಅವಸ್ಥೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನ, ಅನೇಕ ಕಂಪನಿಗಳು ಉಚಿತ ಅಥವಾ ರಿಯಾಯಿತಿಯಲ್ಲಿ ಕಾಫಿಯನ್ನು ನೀಡುತ್ತವೆ.
ಇತಿಹಾಸ
ಮಾರ್ಚ್ 3, 2014 ರಂದು ನಡೆದ ಒಂದು ಸಭೆಯಲ್ಲಿ, ಎಕ್ಸ್ಪೋ 2015 ರ ಭಾಗವಾಗಿ ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಮಿಲನ್ನಲ್ಲಿ ಮೊದಲ ಅಧಿಕೃತ ಅಂತರಾಷ್ಟ್ರೀಯ ಕಾಫಿ ದಿನವನ್ನು ಪ್ರಾರಂಭಿಸಲು ತೀರ್ಮಾನಿಸಿತು. ಅಂತರರಾಷ್ಟ್ರೀಯ ಕಾಫಿ ದಿನದ ನಿಖರವಾದ ಮೂಲವು ತಿಳಿದಿಲ್ಲ. 1983 ರಲ್ಲಿ “ದಿ ಆಲ್ ಜಪಾನ್ ಕಾಫಿ ಅಸೋಸಿಯೇಷನ್” ಈ ಕಾರ್ಯಕ್ರಮವನ್ನು ಜಪಾನ್ನಲ್ಲಿ ಪ್ರಚಾರ ಮಾಡಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ “ನ್ಯಾಷನಲ್ ಕಾಫಿ ಡೇ” 2005 ರ ಆರಂಭದಲ್ಲಿ ಸಾರ್ವಜನಿಕವಾಗಿ ಪ್ರಸ್ತಾಪಿಸಲಾಗಿದೆ. “ಇಂಟರ್ನ್ಯಾಷನಲ್ ಕಾಫಿ ಡೇ” ಎಂಬ ಹೆಸರನ್ನು ಮೊದಲ ಬಾರಿಗೆ ದಕ್ಷಿಣ ಆಹಾರ ಮತ್ತು ಪಾನೀಯ ಸಂಗ್ರಹಾಲಯವು ಬಳಸಿಕೊಂಡಿತು, ಇದನ್ನು ಆಚರಿಸಲು ಮತ್ತು ಮೊದಲ ನ್ಯೂ ಆರ್ಲಿಯನ್ಸ್ ಕಾಫಿ ಉತ್ಸವವನ್ನು ಘೋಷಿಸಲು ಅಕ್ಟೋಬರ್ 3, 2009 ರಂದು ಪತ್ರಿಕಾಗೋಷ್ಠಿಯಲ್ಲಿ ಕರೆದರು. ಇದನ್ನು ಚೀನಾದಲ್ಲಿ ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಷನ್ನಿಂದ ಪ್ರಚಾರ ಮಾಡಲಾಯಿತು, ಇದು ಮೊದಲು 1997 ರಲ್ಲಿ ಆಚರಿಸಲ್ಪಟ್ಟಿತು, ಮತ್ತು ಏಪ್ರಿಲ್ 2001 ರ ಆರಂಭದಲ್ಲಿ ವಾರ್ಷಿಕ ಆಚರಣೆಯನ್ನು ಮಾಡಿತು. ತೈವಾನ್ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕಾಫಿ ದಿನವನ್ನು 2009 ರಲ್ಲಿ ಆಚರಿಸಿತು. ನವೆಂಬರ್ 17, 2005 ರಂದು ನೇಪಾಳವು ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಿತು. ಇಂಡೋನೇಷ್ಯಾವು ಸ್ವಾತಂತ್ರ್ಯ ದಿನವನ್ನು ಆಗಸ್ಟ್ 17, 2006 ರಂದು ಆಚರಿಸುತ್ತದೆ, ಅದೇ ದಿನವನ್ನು ರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸುತ್ತದೆ.

ಫಿಲ್ಟರ್ ಕಾಫಿಯಿಂದ ಕ್ಯಾಪಚೂನ್ ತನಕ ಎಷ್ಟೊಂದು ವಿಧ, ಎಷ್ಟೊಂದು ರುಚಿ, ಎಷ್ಟೊಂದು ವೈವಿಧ್ಯಗಳಿಗೆ ಎಂಬದಕ್ಕೆ ಇಲ್ಲದೇ ಕೆಲ ಉದಾಹರಣೆ ಅಫೋಗೆಟೊ: ಡಾರ್ಕ್ ಬ್ಲಾಕ್ ಕಾಫಿಯನ್ನು ವೆನಿಲ್ಲಾ ಐಸ್‌ಕ್ರೀಂ ಮೇಲೆ ಚೆಲ್ಲಲಾಗುತ್ತದೆ. ಇದನ್ನು ಕ್ಯಾಪಚೂನ್ ಕಪ್‌ನಲ್ಲಿ ಸರ್ವ ಮಾಡುತ್ತಾರೆ. ಎಸ್ಪ್ರೆಸೋ ಅಮೆರಿಕಾನೋ: 100-150 ಎಂಎಲ್‌ ಬಿಸಿ ನೀರಿಗೆ ಡಾರ್ಕ್ ಕಾಫೀ ಬೆರೆಸಬೇಕು.ಇದನ್ನು ಕ್ಯಾಪಚೂನ್ ಕಪ್‌ನಲ್ಲಿ ಸರ್ವ್ ಮಾಡಲಾಗುತ್ತದೆ. ಕೆಫೆಲೆಟ್: 150-300 ಎಂಎಲ್‌ನ ಮಿಲ್ಕ್ ಕಾಫಿಯಾಗಿದೆ ಇದು. ಡಾರ್ಕ್ ಕಾಫಿ ಬಿಸಿ ಹಾಲಿಗೆ ಹಾಕಿ ಸ್ವಲ್ಪ ಹಾಲಿನ ನೊರೆ ಹಾಕಲಾಗುತ್ತದೆ. ಇದನ್ನು ಉದ್ದನೆ ಗ್ಲಾಸ್‌ನಲ್ಲಿ ಸರ್ವ್ ಮಾಡಲಾಗುತ್ತದೆ. ಫ್ಲೇವರ್ ಸಿರಪ್ ಕೂಡಾ ಸೇರಿಸಬಹುದು. ಕೆಫೆ ಮೊಚಾ: ವಿಪ್ಪಡ್ ಕ್ರೀಮ್ ಮತ್ತು ಚಾಕಲೇಟ್ ಜೊತೆ ಇದನ್ನು ತಯಾರಿಸಲಾಗುತ್ತದೆ. ಇದಕ್ಕೆ ಚಾಕಲೇಟ್ ಸಾಸ್ ಬೆರೆಸಲಾಗುತ್ತದೆ. ನಂತರ ಬಿಸಿ ಹಾಲಿಗೆ ಡಾರ್ಕ್ ಕಾಫಿ ಬೆರೆಸಿ ಮಿಕ್ಸ್ ಮಾಡಲಾಗುತ್ತದೆ.

ಕೆಫೆ ಆಲೈಟ್: ಇದು ಫ್ರೆಂಚ್‌ನಲ್ಲಿ ಬೆಳಗಿನ ಜಾವ ಕುಡಿಯುವ ಕಾಫಿ. ಡರ್ರ್ಕಾ ರೋಸ್ಟೆಡ್ ಫಿಲ್ಟರ್ ಕಾಫಿ ಜೊತೆ ಬಿಸಿ ಹಾಲು ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಇದನ್ನು ಬೌಲ್ ಅಥವಾ ದೊಡ್ಡ ಕಾಫಿ ಕಪ್‌ನಲ್ಲಿ ಸರ್ವ್‌ ಮಾಡಲಾಗುತ್ತದೆ.ಕ್ಯಾಪಚೂನೊ: ಇದರಲ್ಲಿ ಡಾರ್ಕ್ ಕಾಫಿ ಮತ್ತು ಹಾಲಿನ ನೊರೆ ಇರುತ್ತದೆ. ಇದು 160-240 ಎಂಎಲ್ ಇರುತ್ತದೆ. ಇದನ್ನು ಕ್ಯಾಪಚೂನೋ ಕಪ್‌ನಲ್ಲಿಯೇ ಸರ್ವ್ ಮಾಡಲಾಗುತ್ತದೆ. ಕೋಲ್ಡ್‌ ಬ್ರ್ಯೂ ಕಾಫಿ: ಇದೊಂದು ಸ್ಮೂತ್ ಕೋಲ್ಡ್ ಕಾಫಿ. ಫ್ರೆಶ್ ಕಾಫಿಯನ್ನು ತಣ್ಣಗಿನ ನೀರಿಗೆ ಬೆರೆಸಲಾಗುತ್ತದೆ. ಎಸ್ಪ್ರೆಸೋ: ಇದು ಸಣ್ಣ ಕಪ್‌ನಲ್ಲಿ ಕೊಡುವ ಕಾಫಿ. 30 ಎಂಎಲ್ ಕಾಫಿಯಷ್ಟೇ ಇರುತ್ತದೆ. ಇದನ್ನು ಎಸ್ಪ್ರೆಸೋ ಕಪ್‌ನಲ್ಲಿ ಸರ್ವ್‌ ಮಾಡುತ್ತಾರೆ. ಎಸ್ಪ್ರೆಸೋ ಕಾನ್ ಪನ್ನ: ಇದಕ್ಕೆ ಟಾಪ್‌ನಲ್ಲಿ ಕ್ರೀಂ ಇಟ್ಟು ಸರ್ವ್ ಮಾಡಲಾಗುತ್ತದೆ. ಇದನ್ನು ಎಸ್ಪ್ರೆಸೋ ಕಪ್‌ನಲ್ಲಿ ಸರ್ವ್ ಮಾಡಲಾಗುತ್ತದೆ. ಎಸ್ಪ್ರೆಸೋ ಮೆಚಿಯಾಟೋ: 50 ಎಂಎಲ್‌ ಕಾಫಿ ಮೇಲೆ ಹಾಲಿನ ಕೆನೆ ಹಾಕಿ ನೀಡಲಾಗುತ್ತದೆ.

ಫ್ರೆಪ್ಪ್: ಡಾರ್ಕ್ ಕಾಫಿ ಜೊತೆ ಹಾಲು ಮತ್ತು ಐಸ್ ಬೆರೆಸಲಾಗುತ್ತದೆ. ಫ್ಲೇವರ್ ಸಿರಪ್ ಬೆರೆಸಬಹುದು.  ಇದನ್ನು ಮಿಲ್ಸ್ ಮಾಡಿ ದೊಡ್ಡ ಗ್ಲಾಸ್‌ನಲ್ಲಿ ಸರ್ವ್ ಮಾಡಲಾಗುತ್ತದೆ. ಫ್ರೀಕ್‌ಶೇಕ್: ಬೇರೆ ಬೇರೆ ವಿಧದ ಟಾಪಿಂಗ್ಸ್ ಜೊತೆ ಇದನ್ನು ಸರ್ವ್ ಮಾಡಲಾಗುತ್ತದೆ. ಕೋಲ್ಡ್ ಬ್ರ್ಯೂ ಕಾಫಿಯಿಂದ ಇದನ್ನು ತಯಾರಿಸಲಾಗುತ್ತದೆ.
ಡೊಪಿಯೋ: ಇದರಲ್ಲಿ ಎರಡು ಪಟ್ಟು ಡಾರ್ಕ್ ಕಾಫಿ ಬೆರೆಸಲಾಗುತ್ತದೆ. ಫ್ಲಾಟ್ ವೈಟ್: ಇದರಲ್ಲಿ ಡಾರ್ಕ್ ಕಾಫಿ ಎರಡು ಪಟ್ಟು ಬೆರೆಸಲಾಗುತ್ತದೆ. ನಂತರ 150-240 ಹಾಲು ಬೆರೆಸಲಾಗುತ್ತದೆ. ಇನ್ನು ಶೈಲಿಯಲ್ಲಿ ಕಾಫಿಯನ್ನು ಸವಿಯುವುದನ್ನು ರೂಡಿಸಿಕೊಳ್ಳಲಾಗಿದೆ.