ಕಲಬುರಗಿ, ಅ 13 ಇಂಡೋನೇಷ್ಯಾ ಜಕಾರ್ತದಲ್ಲಿ ಸ 22 ರಿಂದ 24 ರವರೆಗೆ
ನಡೆದ 10ನೇ ಶೀಟೋರಿಯೋ ಕರಾಟೆ ಡು ಇಂಟನ್ರ್ಯಾಷನಲ್
ಚಾಂಪಿಯನ್ಶಿಪ್ ಆಲ್ ಇಂಡಿಯಾ ಶೀಟೋರಿಯೋ ಕರಾಟೆ ಡು
ಯೂನಿಯನ್ ಅಧ್ಯಕ್ಷರಾದ ಸಿ ಎಸ್ ಅರುಣ್ ಮಾಚಯ್ಯ ರವರ
ನೇತೃತ್ವದಲ್ಲಿ ಕಲಬುರಗಿ ಅಂತರಾಷ್ಟ್ರೀಯ ಕರಾಟೆ ಪಟು
ಮನೋಹರಕುಮಾರ್ ಬೀರನೂರವರ ಹೆವೆನ್ ಫೈಟರ್ಸ್ ತಂಡ
ಐದು ಜನ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಇದರಲ್ಲಿ ಮನೋಹರ್ ಕುಮಾರ್ ಬೀರನೂರು, ಭೀಮ ಶಂಕರ್
ಗೋಗಿ, ಹರ್ಷಿತ್ ಚೌವ್ಹಾಣ ಪಂದ್ಯಾವಳಿಯಲ್ಲಿ ಭಾಗವಹಿಸಿರುತ್ತಾರೆ. ಅದೇ
ರೀತಿ ಅಭಯ್ ವೀ ಚೌವ್ಹಾಣ (ಕಂಚು), ಶರಣರೆಡ್ಡಿ (ಕಂಚು)
ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಕುಮಿತೇ ವಿಭಾಗದಲ್ಲಿ ಕಂಚಿನ
ಪದಕ ಪಡೆದು ಭಾರತಕ್ಕೆ ರಾಜ್ಯಕ್ಕೆ ಮತ್ತು ಕಲ್ಯಾಣ ಕರ್ನಾಟಕ
ಕಲಬುರ್ಗಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ಇವರ ಸಾಧನೆಗೆ ಕರ್ನಾಟಕ ಸರ್ಕಾರದ ಹೋಂ ಚಿಪ್ಸ ಸೆಕ್ರೆಟರಿ ಡಾ.
ರಜನೇಶ್ ಗೋಯಲ್, ವಿಧಾನ ಪರಿಷತ್ತಿನ ಸದಸ್ಯರಾದ ಶಶಿಲ ಜೀ
ನಮೋಶಿ, ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್
ಮತ್ತಿಮೂಡ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ
ಜಿಲ್ಲಾ ಪಂಚಾಯತ ಅಧ್ಯಕ್ಷರಾದ ನಿತಿನ್ ವಿ ಗುತ್ತೇದಾರ್, ಬಿಜೆಪಿ
ಮುಖಂಡರಾದ ಚಂದು ಪಾಟೀಲ್, ಕಲ್ಯಾಣ ಕರ್ನಾಟಕ ಕರಾಟೆ
ಸಂಸ್ಥೆಯ ಅಧ್ಯಕ್ಷರಾದ ದಶರಥ್ ಎಸ್ ದುಮ್ಮನ್ಸೂರ್, ಬಿಜೆಪಿ ಹಿರಿಯ
ಮುಖಂಡರಾದ ರಾಜು ವಾಡೆಕರ್, ಕಾಂಗ್ರೆಸ ಮುಖಂಡ ಲಿಂಗರಾಜ್
ತಾರಾಪೇಲ್, ಶ್ರೀ ಸಂಗಮ್ ವಿದ್ಯಾ ಮಂದಿರ್ ಶಾಲೆಯ
ಕಾರ್ಯದರ್ಶಿ ಬಸವರಾಜ್ ಇಮುದ್ದಾಪುರ್ ಮತ್ತು ಹೆವೆನ್
ಫೈಟರ್ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳು ಸಾಧನೆಗೆ
ಹರ್ಷ ವ್ಯಕ್ತಪಡಿಸಿದ್ದಾರೆ.