ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಬೀರನೂರ ನಾಲ್ಕನೇ ಬಾರಿ ಆಯ್ಕೆ

ಕಲಬುರಗಿ:ಆ.12: ಸೆಪ್ಟೆಂಬರ್ 19 ರಿಂದ 24ರ ವರೆಗೆ ಇಂಡೋನೇಷಿಯ್ಯ ಜಕಾರ್ತದಲ್ಲಿ ನಡೆಯುವ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ನಾಲ್ಕನೇ ಬಾರಿ ಭಾರತ ತಂಡದ ಪ್ರತಿನಿಧಿಯಾಗಿ ಭಾಗವಹಿಸುತ್ತಿರುವ ಕಲ್ಯಾಣ ಕರ್ನಾಟಕ ಕಲಬುರಗಿ ಜಿಲ್ಲೆಯ ಅಂತರಾಷ್ಟ್ರೀಯ ಕರಾಟೆಪಟು ಮನೋಹರ ಕುಮಾರ ಬೀರನೂರ ಅವರು ಆಯ್ಕೆ ಯಾಗಿದ್ದಾರೆ ಎಂದು ಸಂಸ್ಥೆಯ ಮಹಿಳಾ ಕಾರ್ಯದರ್ಶಿ ಸುನಿತಾ ದೊಡ್ಡಮನಿ ತಿಳಿಸಿದ್ದಾರೆ.

ಇದೇ ಸೆಪ್ಟೆಂಬರ್ 19 ರಿಂದ 21 ರವರೆಗೆ ಇಂಡೋನೇಷಿಯಾ ಜಕಾರ್ತದಲ್ಲಿ ನಡೆಯುವ 10ನೇ ಶೀಟೋರಿಯೋ ಕರಾಟೆ ಡೂ ಚಾಂಪಿಯನ್‍ಶಿಪ್‍ನಲ್ಲಿ ಕಾಲ್ಯಾಣ ಕರ್ನಾಟಕ ಕಲಬುರಗಿ ಜಿಲ್ಲೆಯ ಹೆಸರಾಂತ ಅಂತರಾಷ್ಟ್ರೀಯ ಕರಾಟೆಪಟು ಮನೋಹರ ಕುಮಾರ ಬೀರನೂರ ನಾಲ್ಕನೇ ಬಾರಿ ಇಂಡೋನೇಷಿಯಾ ಜಕಾರ್ತದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ +84 ಕೆ.ಜಿ. ಕುಮಿತ (ಪೈಟ್) ವಿಭಾಗದಲ್ಲಿ ಭಾರತ ತಂಡದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ.

ಹಾಗೆ ಮನೋಹರ ಕುಮಾರ ಬೀರನೂರ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರ ಪಡೆದು ಸಾಧನೆ ಮಾಡಿದ್ದಾರೆ. ಅಲ್ಲದೇ 2018ರಲ್ಲಿ ಇದು ಇಂಡೋನೇಷಿಯ್ಯ ಜಕಾರ್ತದಲ್ಲಿ ನಡೆದ ಅಂತರಷ್ಟ್ರೀಯ ಕರಾಟೆ ಪಂದ್ಯವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದು ಭಾರತ, ಕರ್ನಾಟಕ ರಾಜ್ಯ, ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಗೆ ಕೀರ್ತಿ ತಂದು ಕೊಟ್ಟ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ಅದೇ ರೀತಿ ಈ ವರ್ಷ ಕರಾಟೆ ಪಂದ್ಯಾವಳಿಯಲ್ಲಿ ಸಾಧನೆಮಾಡಿ ದೇಶಕ್ಕೆ ಕೀರ್ತಿತರಲೇಂದು ಆಲ್ ಇಂಡಿಯಾ ಶೀಟೊ-ರಿಯೋ ಕರಾಟೆ ಡೂ ಯುನಿಯನ್ ಮತ್ತು ಅಖಿಲ ಕರ್ನಾಟಕ ಸ್ಪೋಟ್ಸ್ ಕರಾಟೆ ಆಸೋಸಿಯೇಶನ್ ಅಧ್ಯಕ್ಷರು ಹಾಗೂ ಮಾಜಿ ಎಂ ಎಲ್‍ಸಿ ಶಿಹಾನ್ ಸಿ. ಎಸ್ ಅರುಣ್ ಮಾಚಯ್ಯಾ, ಕಲ್ಯಾಣ ಕರ್ನಾಟಕ ಅಧ್ಯಕ್ಷ ದಶರಥ ಎಸ್ ದುಮ್ಮನ್ಸೂರ್ ಮತ್ತು ಕಲಬುರಗಿ ಜಿಲ್ಲೆಯ ರಾಜಕೀಯ ಮುಖಂಡರು, ಅಧಿಕಾರಿ ವರ್ಗದವರು, ಕ್ರೀಡಾ ಅಭಿಮಾನಿಗಳು ಹೇವನ್ ಪೈಟರ್ಸ್ ಸಂಸ್ಥೆಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಸುನಿತಾ ದೊಡ್ಡಮನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.