ಅಂತರಾಜ್ಯ ಶ್ರೀಗಂಧ ಕಳ್ಳರ ಬಂಧನ

ಮೈಸೂರು:ಜ:09: ಸರ್ಕಾರಿ ಕಚೇರಿ ಆವರಣದಲ್ಲೇ ಗಂಧದ ಮರ ಕದಿಯುತ್ತಿದ್ದ ಖದೀಮರನ್ನು ನೈಜರ್ ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಆರೋಪಿಗಳಿಂದ 5ಲಕ್ಷ ಮೌಲ್ಯದ 46ಕೆ.ಜಿ ಶ್ರೀಗಂಧ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದ್ದು, ಇವರು ಒಟ್ಟು 10ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಾಗಿದ್ದಾರೆ. ಈ ನಾಲ್ವರು ತಮಿಳುನಾಡಿನ ಈರೋಡ್ ಮೂಲದ ಆರೋಪಿಗಳು ಮೈಸೂರಿನಲ್ಲಿ ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು.
ಪ್ರಮುಖ ಆರೋಪಿ ರಾಹಿಲ್ ನಾಪತ್ತೆಯಾಗಿದ್ದು, ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭೂಪತಿ, ಪ್ರಾನ್ಸಿಸ್, ಸೆಂದಿಲ್ ಕುಮಾರ್, ಪ್ರವೀಣ್ ಕುಮಾರ್ ಬಂಧಿತ ಆರೋಪಿಗಳು.
ಹಗಲು ಹೊತ್ತಿನಲ್ಲಿ ಮರಗಳ ಗುರುತು ಮಾಡಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಇವರು ನಜರ್ ಬಾದ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುವಾಗ ಪೆÇಲೀಸರೊಗೆ ಸಿಕ್ಕಿಬಿದ್ದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಗೀತಾ ಪ್ರಸನ್ನ ಮಾಹಿತಿ.