ಅಂತರವಲಯ ಮಟ್ಟದ ಚೆಸ್ ಪಂದ್ಯಾವಳಿ

ಸಂಜೆವಾಣಿ ವಾರ್ತೆ

ಚಿತ್ರದುರ್ಗ. ಆ.೧೨; ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ  ಸಹಯೋಗದೊಂದಿಗೆ ವಿಟಿಯು ಅಂತರ ವಲಯ ಮಟ್ಟದ ಪುರುಷರ ಮತ್ತು ವನಿತೆಯರ ಚೆಸ್ ಪಂದ್ಯಾವಳಿಯ 2ನೇ ದಿನದ ಆಟದಲ್ಲಿ ಪುರುಷರ ವಿಭಾಗದಲ್ಲಿ ನಿಟ್ಟೆಯ ಎನ್‌ಎಂಎಎAಐಟಿ, ಮಂಗಳೂರಿನ ಎಸ್‌ಜೆಇಸಿ, ಹುಬ್ಬಳ್ಳಿಯ ಕೆಎಲ್‌ಇಐಟಿ, ಮಂಗಳೂರಿನ ಎಸ್‌ಐಟಿ, ದಾವಣಗೆರೆಯ ಜಿಎಂಐಟಿ, ಬೆಳಗಾವಿಯ ಕೆಎಲ್‌ಎಸ್‌ಜೆಐಟಿ, ಮೈಸೂರಿನ ಎನ್‌ಐಇ, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ತಂಡಗಳು, ವನಿತೆೆಯರ ವಿಭಾಗದಲ್ಲಿ ನಿಟ್ಟೆಯ ಎನ್‌ಎಂಎಎಂಐಟಿ, ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ತಂಡಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಜ್ಯಮಟ್ಟದ ಚೆಸ್ ಪಂದ್ಯಾವಳಿ  ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಪ್ರಾಚಾರ್ಯರಾದ ಡಾ. ಭರತ್ ಪಿ ಬಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ