ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: ಆಸ್ಪತ್ರೆ ಮಹಿಳಾ ಸಿಬ್ಬಂದಿಗೆ ಸನ್ಮಾನ


ಹುಬ್ಬಳ್ಳಿ,ಮಾ.9: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಚಿಲ್ ವಾಟ್ಸ್ ಆ್ಯಪ್ ಗ್ರುಪ್ ವತಿಯಿಂದ ನಗರದ ಚಿಟಗುಪ್ಪಿ ಆಸ್ಪತ್ರೆಯ 54 ಮಹಿಳಾ ಸಿಬ್ಬಂದಿಯನ್ನು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಮಾತನಾಡಿ, ಚಿಟುಗುಪ್ಪಿ ಆಸ್ಪತ್ರೆಯಲ್ಲಿ ಶೇ 90ರಷ್ಟು ಮಹಿಳಾ ಸಿಬ್ಬಂದಿಯೇ ಇದ್ದು, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಸ ಸಿಂಗ್ ಜಮಾದಾರ ಮಾತನಾಡಿ, ಚಿಟಗುಪ್ಪಿ ಆಸ್ಪತ್ರೆ ಹುಬ್ಬಳ್ಳಿ ಮಹಾನಗರದ ಬಡವರ ಎರಡನೇ ಸಂಜೀವಿನಿ. ಈ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುವಲ್ಲಿ ಇಲ್ಲಿನ ಮಹಿಳಾ ಸಿಬ್ಬಂದಿಯ ಪಾತ್ರ ಪ್ರಮುಖವೆನಿಸಿದೆ ಎಂದರು.
ಚಿಲ್ ವಾಟ್ಸ್ ಆ್ಯಪ್ ಗ್ರುಪ್‍ನ ಸದಸ್ಯರಾದ ಸಾಮ್ರಾಟ್ ಸಿಂಗ್ ಹಾಗೂ ಮೇಘನಾ ಲೋಡಯಾ ನೇತೃತ್ವ ವಹಿಸಿದ್ದರು. ರಂಜಿತಾ ಕಲಗೇರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಾದಿರಾಜ ಕುಲಕರ್ಣಿ ವಂದಿಸಿದರು.
ಈ ಸಂದರ್ಭದಲ್ಲಿ ಚಿಟಗುಪ್ಪಿ ಆಸ್ಪತ್ರೆ ಡಾ.ಭಾರತಿ ಹಾಗೂ ಸಿಬ್ಬಂದಿ, ಚಿಲ್ ವಾಟ್ಸ್‍ಆ್ಯಪ್ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.